PM Kisan 21st Installment – ಪಿಎಂ ಕಿಸಾನ್ 21ನೇ ಕಂತು ರೂ.2000 ಈ ದಿನ ಬಿಡುಗಡೆ..
ನಮಸ್ಕಾರ ಗೆಳೆಯರೇ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯ 21ನೇ ಕಂತು ಬಿಡುಗಡೆಗೆ ಸಂಬಂಧಿಸಿದಂತೆ ಇದೀಗ ಹೊಸ ಮಾಹಿತಿ ಹೊರ ಬಂದಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ 21ನೇ ಕಂತಿನ ರೂ.2,000 ಯಾವಾಗ ಬಿಡುಗಡೆ ಆಗುತ್ತೆ ಹಾಗೂ ರೈತರು ಹಣ ಪಡೆಯಲು ಏನು ಮಾಡಬೇಕು ಎಂಬ ಮಾಹಿತಿ ತಿಳಿದುಕೊಳ್ಳೋಣ
ಪಿಎಂ ಕಿಸಾನ್ 21ನೇ ಕಂತಿನ ಯಾವಾಗ ಬಿಡುಗಡೆ (PM Kisan 21st Installment).?
ಸ್ನೇಹಿತರೆ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯ 21ನೇ ಕಂತಿನ ರೂ.2000 ಹಣ ಈಗಾಗಲೇ ಹರಿಯಾಣ ಮತ್ತು ಪಂಜಾಬ್ ಹಾಗೂ ಪ್ರವಾಹ ಪೀಡಿತ ರಾಜ್ಯದ ರೈತರ ಖಾತೆಗೆ 21ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಉಳಿದ ರಾಜ್ಯದ ರೈತರ ಖಾತೆಗೆ ಹಣ ಯಾವಾಗ ಬಿಡುಗಡೆಯಾಗಬಹುದು ಎಂಬ ಮಾಹಿತಿ ಈಗ ತಿಳಿದುಕೊಳ್ಳೋಣ

ಹೌದು ಗೆಳೆಯರೆ ಕೆಲವೊಂದು ರಾಜ್ಯದ ರೈತರ ಖಾತೆಗೆ ಈಗಾಗಲೇ ಹಣ ವರ್ಗಾವಣೆ ಮಾಡಲಾಗಿದ್ದು. ನಮ್ಮ ಕರ್ನಾಟಕದ ರಾಜ್ಯದ ರೈತರಿಗೆ ಹಾಗೂ ಉಳಿದ ಜಿಲ್ಲೆಯ ರೈತರ ಖಾತೆಗೆ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದಿನಾಂಕ ಘೋಷಣೆ ಆಗಿಲ್ಲ.
ಆದರೆ ಕೆಲವೊಂದು ಮಾಧ್ಯಮಗಳ ಮಾಹಿತಿಯ ಪ್ರಕಾರ ಈ ನವಂಬರ್ ತಿಂಗಳ ಅಂತ್ಯದ ಒಳಗಡೆ 21ನೇ ಕಂತಿನ ರೂ.2000 ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ ಹಾಗಾಗಿ ರೈತರು ಹಣ ಬರುವವರೆಗೂ ಕಾಯಬೇಕು
ಪಿಎಂ ಕಿಸಾನ್ 21ನೇ ಕಂತಿನ ಯಾವ ರೈತರ ಖಾತೆಗೆ ಬಿಡುಗಡೆ ಮಾಡಲಾಗಿದೆ (PM Kisan 21st Installment)..?
ಹೌದು ಗೆಳೆಯರೆ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯ 21ನೇ ಕಂತಿನ ಪ್ರವಾಹ ಹಾಗೂ ನೈಸರ್ಗಿಕ ವಿಪತ್ತಿನಿಂದ ಬಳಲುತ್ತಿರುವ ಪಂಜಾಬ್, ಹಿಮಾಚಲ ಪ್ರದೇಶ ಹಾಗೂ ಉತ್ತರಖಾಂಡ್ ರಾಜ್ಯದ ಸುಮಾರು 27 ಲಕ್ಷ ರೈತರ ಖಾತೆಗೆ ಹಣ ಈಗಾಗಲೇ ಬಿಡುಗಡೆ ಮಾಡಲಾಗಿದೆ ಹಾಗೂ ಎಲ್ಲ ರೈತರು ಸಂಪೂರ್ಣವಾಗಿ ಈ ಒಂದು 21ನೇ ಕಂತಿನ ಹಣ ಪಡೆದುಕೊಂಡಿದ್ದಾರೆ
ಅದೇ ರೀತಿ ಏಳು ಅಕ್ಟೋಬರ್ 2025 ರಂದು ಜಮ್ಮು-ಕಾಶ್ಮೀರದ ರಾಜ್ಯದ ಸುಮಾರು 8.55 ಲಕ್ಷ ರೈತರ ಖಾತೆಗೆ 21ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ, ಹಾಗೂ ಇದರಲ್ಲಿ ಸುಮಾರು 85,000 ಮಹಿಳಾ ರೈತರು ಸೇರಿದ್ದಾರೆ, ಜಮ್ಮು ಮತ್ತು ಕಾಶ್ಮೀರದ ರಾಜ್ಯದ ರೈತರ ಖಾತೆಗೆ ಸುಮಾರು 171 ಕೋಟಿ ಮೊತ್ತದ ವರ್ಗಾವಣೆ ಮಾಡಲಾಗಿದೆ.
ಪಿಎಂ ಕಿಸಾನ್ 21ನೇ ಕಂತಿನ ಹಣ ಪಡೆಯಲು ರೈತರು ಕಡ್ಡಾಯವಾಗಿ ಈ ಕೆಲಸ ಮಾಡಿ..?
e-kyc ಪೂರ್ಣಗೊಳಿಸಿ: ರೈತರು ಪಿಎಂ ಕಿಸಾನ್ ಅರ್ಜಿ E-kyc ಪ್ರಕ್ರಿಯೆ ಪೂರ್ಣಗೊಳಿಸಬೇಕು ಹಾಗೂ ತಮ್ಮ ಜಮೀನು ದಾಖಲಾತಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು.
FID ಕ್ರಿಯೇಟ್ ಮಾಡಿಸಿ: ರೈತರು ಕಡ್ಡಾಯವಾಗಿ ತಮ್ಮ ಜಮೀನು ದಾಖಲಾತಿಗೆ ಫ್ರೂಟ್ ಅಥವಾ ಎಫ್ ಐ ಡಿ ಕ್ರೀಯೇಟ್ ಮಾಡಿಸಬೇಕು ಅಂದರೆ ಮಾತ್ರ 21ನೇ ಕಂತಿನ ರೂ. 2000 ಹಣ ಸಿಗುತ್ತದೆ
ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರಿಸಿ: ಹೌದು ಗೆಳೆಯರೆ 20ನೇ ಕಂತಿನ ಹಣ ತುಂಬಾ ರೈತರ ಖಾತೆಗೆ ವರ್ಗಾವಣೆ ಆಗಿಲ್ಲ.! ಇದಕ್ಕೆ ಕಾರಣ ತುಂಬಾ ರೈತರ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲ ಹಾಗಾಗಿ ರೈತರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಮೀರಿಸಬೇಕು ಹಾಗೂ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಮತ್ತು ekyc ಪ್ರಕ್ರಿಯ ಪೂರ್ಣಗೊಳಿಸಿ ಇದರ ಜೊತೆಗೆ NPCI ಮ್ಯಾಪಿಂಗ್ ಮಾಡಿಸಿ
ಈ ಎಲ್ಲಾ ಕೆಲಸ ಮಾಡಲು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ..
ಸ್ನೇಹಿತರ ಈ ಮಾಹಿತಿ ಇಷ್ಟವಾದರೆ ಆದಷ್ಟು ರೈತರಿಗೆ ಶೇರ್ ಮಾಡಿ ಹಾಗೂ ಇದೇ ರೀತಿ ಮಾಹಿತಿ ಪಡೆಯಲು ವಾಟ್ಸಾಪ್ ಚಾನಲ್ಗಳಿಗೆ ಸೇರಿಕೊಳ್ಳಿ
BPL Ration Card Cancelled – ಇಷ್ಟು ಜಮೀನು ಇದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು.! ಇಲ್ಲಿದೆ ಮಾಹಿತಿ









