PM Kisan 20Th Instalment: ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ 2,000 ಹಣ ಯಾವಾಗ ಜಮಾ! ಇಲ್ಲಿದೆ ಮಾಹಿತಿ

PM Kisan 20Th Instalment: ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ 2,000 ಹಣ ಯಾವಾಗ ಜಮಾ! ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಅಡಿಯಲ್ಲಿ ವರ್ಷಕ್ಕೆ ₹6000 ಹಣವನ್ನು ಮೂರು ಕಂತಿನ ರೂಪದಲ್ಲಿ ಪ್ರತಿ 4 ತಿಂಗಳಿಗೆ ಒಮ್ಮೆ ರೂ.2000 ಯಂತೆ ರೈತರ ಖಾತೆಗೆ ನೇರ ವರ್ಗಾವಣೆ ಮಾಡುತ್ತಾ ಬಂದಿದೆ.

ಇಲ್ಲಿವರೆಗೂ ರೈತರು 19 ಕಂತಿನ ಹಣದವರೆಗೆ ಈ ಒಂದು ಯೋಜನೆ ಅಡಿಯಲ್ಲಿ ಹಣ ಪಡೆದುಕೊಂಡಿದ್ದಾರೆ ಹಾಗಾಗಿ ಟಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆಯ 20ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ರೈತರು ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಅಧಿಕೃತ ವೆಬ್ಸೈಟ್ ಮೂಲಕ ಅಪ್ಡೇಟ್ ಮಾಡಲಾಗಿದೆ ಹಾಗಾಗಿ ನಾವು ಈ ಲೇಖನ ಮೂಲಕ ಹಣ ಬಿಡುಗಡೆಯ ದಿನಾಂಕ ಯಾವಾಗ ಹಾಗೂ ಹಣ ಜಮಾ ಆಗಲು ರೈತರು ಏನು ಮಾಡಬೇಕು ಎಂಬ ಮಾಹಿತಿ ತಿಳಿದುಕೊಳ್ಳೋಣ

 

20ನೇ ಕಂತಿನ ಹಣ ಯಾವ ತಾರೀಕು ರೈತರ ಖಾತೆಗೆ ಜಮಾ..?

ಕೇಂದ್ರ ಸರ್ಕಾರ ಇದೀಗ ಪ್ರಧಾನಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆ ಅಡಿಯಲ್ಲಿ ರೈತರಿಗೆ ಇಲ್ಲಿವರೆಗೂ 19ನೇ ಕಂತಿನ ಬಿಡುಗಡೆ ಮಾಡಿದೆ. ಹೌದು ಸ್ನೇಹಿತರೆ, ಕಳೆದ ಫೆಬ್ರವರಿ ತಿಂಗಳಿನಲ್ಲಿ ಈ 19ನೇ ಕಂತಿನ ಹಣ ಬಿಡುಗಡೆಯಾಗಿದೆ. ಇದೀಗ ರೈತರು ಈ ಯೋಜನೆಯ 20ನೇ ಕಂಚಿನ ಹಣ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದಾರೆ

PM Kisan 20Th Instalment
PM Kisan 20Th Instalment

 

WhatsApp Group Join Now
Telegram Group Join Now       

ಪಿಎಂ ಕಿಸಾನ್ ಯೋಜನೆ ವೇಳಾಪಟ್ಟಿ ಪ್ರಕಾರ 20ನೇ ಕಂತಿನ ಹಣ ಜೂನ್ ತಿಂಗಳ ಅಂತ್ಯದ ಒಳಗಡೆ ಅಥವಾ ಜುಲೈ ಮೊದಲ ವಾರದ ಒಳಗಡೆ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಹೌದು ಸ್ನೇಹಿತರೆ ಪ್ರತಿ ವರ್ಷವೂ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಪಿ ಎಮ್ ಕಿಸಾನ್ ಯೋಜನೆಯ ಹಣ ಬಿಡುಗಡೆ ಮಾಡಲಾಗುತ್ತದೆ ಹಾಗಾಗಿ ರೈತರು ಹಣ ಪಡೆಯಲು ತಪ್ಪದೆ ಕೆಳಗಡೆ ನೀಡಿದ ಎಲ್ಲಾ ಕೆಲಸವನ್ನು ಮಾಡಬೇಕು

 

ಇಂಥವರಿಗೆ ಮಾತ್ರ 2000 ಹಣ ಸಿಗುತ್ತೆ..?

ಪಿಎಂ ಕಿಸಾನ್ ಯೋಜನೆ 20ನೇ ಕಂತಿನ ಹಣ ಪಡೆಯಲು ಬಯಸುವಂತಹ ರೈತರು ಕಡ್ಡಾಯವಾಗಿ ಈ ಕೆಲಸ ಮಾಡಿದರ ಮಾತ್ರ ನಿಮ್ಮ ಖಾತೆಗೆ ಹಣ ಬರುತ್ತೆ

1) ರೈತರು ಕಡ್ಡಾಯವಾಗಿ ತಮ್ಮ ಅರ್ಜಿ e-kyc ಪ್ರಕ್ರಿಯೆ ಪೂರ್ಣಗೊಳಿಸಿರಬೇಕು

2) ರೈತರು ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿರಬೇಕು

WhatsApp Group Join Now
Telegram Group Join Now       

3) ರೈತರು ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಅಥವಾ ಆಧಾರ್ ಕಾರ್ಡ್ ಮೂಲಕ ಹಣ ವರ್ಗಾವಣೆ ಮಾಡುವ ರೀತಿಯಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು

4) ರೈತರ ಎಲ್ಲಾ ಜಮೀನು ದಾಖಲಾತಿಗಳು ಸರಿಯಾಗಿ ಇರಬೇಕು

 

 

ರೂ.2000 ಹಣ ಜಮಾ ಆಗ ಸ್ಥಿತಿ ಪರಿಶೀಲನೆ ಮಾಡುವುದು ಹೇಗೆ..?

ಪಿಎಂ ಕಿಸಾನ್ ಯೋಜನೆಯ 2000 ಹಣ ಜಮಾ ಆದ ಬಗ್ಗೆ ಮಾಹಿತಿ ತಿಳಿಯಲು ರೈತರು ತಮ್ಮ ಮೊಬೈಲ್ ಮೂಲಕ ತುಂಬಾ ಸುಲಭವಾಗಿ ಪರಿಶೀಲನೆ ಮಾಡಬಹುದು

 

ಹಣದ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

ಮೇಲೆ ಕೊಟ್ಟಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ ನಂತರ ಅಲ್ಲಿ ಕೊಟ್ಟಿರುವಂತ ಕ್ಯಾಪ್ಚರ್ ಕೋಡ್ ನಮೂದಿಸಿ ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತೆ ಅದನ್ನು ನಮೂದಿಸಿ ನಿಮ್ಮ ಖಾತೆಗೆ ಇಲ್ಲಿವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ತುಂಬಾ ಸುಲಭವಾಗಿ ಚೆಕ್ ಮಾಡಬಹುದು

Phone pe personal loan 2025: ಫೋನ್ ಪೇ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಪಡೆಯಿರಿ

Leave a Comment

?>