labour Card scholarship 2024 apply: ಲೇಬರ್ ಕಾರ್ಡ್ ಸ್ಕಾಲರ್ ಶಿಪ್ ಅರ್ಜಿ ಪ್ರಾರಂಭ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನಮ್ಮ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕ ಮಕ್ಕಳಿಗೆ ಹಾಗೂ ಕೂಲಿ ಕಾರ್ಮಿಕ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯದ ಕಾರ್ಮಿಕ ಕಲ್ಯಾಣ ಮಂಡಳಿ ಮತ್ತು ಕಾರ್ಮಿಕ ಇಲಾಖೆ ಕಡೆಯಿಂದ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ನೀಡುತ್ತಿದೆ ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿಗಳು 1000 ರೂಪಾಯಿಯಿಂದ 11000 ವರೆಗೆ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು ಹಾಗಾಗಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಇದೇ ತಿಂಗಳು ಕೊನೆಯ ದಿನಾಂಕ ಇದೆ ಆದ್ದರಿಂದ ಈ ಒಂದು ಸ್ಕಾಲರ್ಶಿಪ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ
ಕೆನರಾ ಬ್ಯಾಂಕ್ ಮೂಲಕ ಯಾವುದೇ ಗ್ಯಾರೆಂಟಿ ಇಲ್ಲದೆ 10 ಲಕ್ಷ ರೂಪಾಯಿವರೆಗೆ ಪರ್ಸನಲ್ ಲೋನ್ ಪಡೆಯಿರಿ ಇಲ್ಲಿದೆ ವಿವರ
ಲೇಬರ್ ಕಾರ್ಡ್ ಸ್ಕಾಲರ್ಶಿಪ್ (labour Card scholarship 2024 apply)..?
ಹೌದು ಸ್ನೇಹಿತರೆ, ನಮ್ಮ ರಾಜ್ಯ ಸರ್ಕಾರ ಕಾರ್ಮಿಕ ಕಲ್ಯಾಣ ಮಂಡಳಿ ಮತ್ತು ಕಾರ್ಮಿಕ ಇಲಾಖೆ ಕಡೆಯಿಂದ ಕಟ್ಟಡ ಕಾರ್ಮಿಕ ಮಕ್ಕಳಿಗೆ ಹಾಗೂ ಕೂಲಿ ಕಾರ್ಮಿಕ ಮಕ್ಕಳಿಗೆ ಮತ್ತು ಲೇಬರ್ ಕಾರ್ಡ್ ಹೊಂದಿದಂತ ಕುಟುಂಬದ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಹಾಗೂ ತಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಖರ್ಚು ವೆಚ್ಚಗಳನ್ನು ಸರಿದೂಗಿಸಲು ರಾಜ್ಯ ಸರ್ಕಾರ ಕಡೆಯಿಂದ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಮೂಲಕ ಆರ್ಥಿಕ ನೆರವು ದೊರೆಯುತ್ತದೆ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಯೋಜನೆಯ ಲಾಭ ಪಡೆದುಕೊಳ್ಳಿ
ಹೌದು ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಇರುವಂತ ಕಟ್ಟಡ ಕಾರ್ಮಿಕ ಮಕ್ಕಳಿಗೆ ಹಾಗೂ ಕೂಲಿ ಕಾರ್ಮಿಕ ಮಕ್ಕಳಿಗೆ ಮತ್ತು ಲೇಬರ್ ಕಾರ್ಡ್ ಹೊಂದಿದಂತ ಕುಟುಂಬದ ಮಕ್ಕಳಿಗೆ ರಾಜ್ಯ ಸರ್ಕಾರ ಕಡೆಯಿಂದ ರೂ.1000 ಯಿಂದ ಗರಿಷ್ಠ ₹11,000 ರೂಪಾಯಿವರೆಗೆ ವಿದ್ಯಾರ್ಥಿ ವೇತನವನ್ನು ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು ಈ ಒಂದು ವಿದ್ಯಾರ್ಥಿ ವೇತನಕ್ಕೆ ನಮ್ಮ ರಾಜ್ಯದ ಕೂಲಿಕಾರ್ಮಿಕ ಮಕ್ಕಳು ಹಾಗೂ ಕಟ್ಟಡ ಕಾರ್ಮಿಕ ಮಕ್ಕಳು ಮತ್ತು ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇತರ ವರ್ಗದ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು
ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು (labour Card scholarship 2024 apply)..?
ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಇರುವಂತ ಕಟ್ಟಡ ಕಾರ್ಮಿಕ ಮಕ್ಕಳು ಹಾಗೂ ಕೂಲಿ ಕಾರ್ಮಿಕ ಮಕ್ಕಳು ಹಾಗೂ ಬಡವರ್ಗದ ಮಕ್ಕಳು ಮತ್ತು ಲೇಬರ್ ಕಾರ್ಡ್ ಹೊಂದಿದಂತಹ ಕುಟುಂಬದ ಮಕ್ಕಳು ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ನೀವು ಈ ಕೆಳಗಿನ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಈ ವಿದ್ಯಾರ್ಥಿ ವೇತನಕ್ಕೆ ಈಗಲೇ ಅರ್ಜಿ ಸಲ್ಲಿಸಿ
- 1-12 ನೇ ತರಗತಿ ವಿದ್ಯಾರ್ಥಿಗಳು
- ಪದವಿ ವಿದ್ಯಾರ್ಥಿಗಳು
- ಡಿಪ್ಲೋಮಾ ವಿದ್ಯಾರ್ಥಿಗಳು
- ಐಟಿಐ ವಿದ್ಯಾರ್ಥಿಗಳು
- ವೈದ್ಯಕೀಯ ವಿದ್ಯಾರ್ಥಿಗಳು
- ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳು
- ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು
ಸ್ನೇಹಿತರ ಮೇಲೆ ನೀಡಿದಂತಹ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು ಆದರೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯ ಕುಟುಂಬದ ಪೋಷಕರು ಕಡ್ಡಾಯವಾಗಿ ಲೇಬರ್ ಕಾರ್ಡ್ ಹೊಂದಿರಬೇಕು
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
- ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯ ಪೋಷಕರು ಕಡ್ಡಾಯವಾಗಿ ಲೇಬರ್ ಕಾರ್ಡ್ ಹೊಂದಿರಬೇಕು
- ಈ ಸ್ಕಾಲರ್ಶಿಪ್ ಪಡೆಯಲು ಬಯಸುವ ವಿದ್ಯಾರ್ಥಿಗಳು ಕಟ್ಟಡ ಕಾರ್ಮಿಕ ಮಕ್ಕಳು ಅಥವಾ ಕೂಲಿ ಕಾರ್ಮಿಕ ಮಕ್ಕಳು ಆಗಿರಬೇಕು
- ಈ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಪಡೆಯಲು ಬಯಸುವ ವಿದ್ಯಾರ್ಥಿಗಳು ಕರ್ನಾಟಕದ ನಿವಾಸಿಗಳಾಗಿರಬೇಕು
- ಈ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಪಡೆಯಲು ಬಯಸುವ ವಿದ್ಯಾರ್ಥಿಗಳು ಒಂದು ಕುಟುಂಬದಲ್ಲಿ ಇಬ್ಬರಿಗೆ ಮಾತ್ರ ಅವಕಾಶವಿದೆ
- ಲೇಬರ್ ಕಾಡು ಸ್ಕಾಲರ್ಶಿಪ್ ಪಡಿಯಲು ಬಯಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂಪಾಯಿ ಮೀರಬಾರದು
ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು..?
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಪೋಷಕರ ಲೇಬರ್ ಕಾರ್ಡ್
- ವಿದ್ಯಾರ್ಥಿಯ ಪೋಷಕರ ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಇಂದಿನ ಎಲ್ಲಾ ತರಗತಿ ಅಂಕಪಟ್ಟಿಗಳು
- ಮೊಬೈಲ್ ನಂಬರ್
- ಪಾಸ್ಪೋರ್ಟ್ ಸೈಜ್ ಫೋಟೋಸ್
- ಇತರ ಅಗತ್ಯ ದಾಖಲಾತಿಗಳು
ಅರ್ಜಿ ಸಲ್ಲಿಸುವುದು ಹೇಗೆ..?
ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗುವ ಅಂತ ಲಿಂಕ್ ಅನ್ನು ನಾವು ಕೆಳಗಡೆ ನೀಡಿದ್ದೇವೆ ಅಥವಾ ನಿಮಗೆ ಹತ್ತಿರವಿರುವಂತಹ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಒಂದು ಲೇಬರ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 31/12/2024
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
https://klwbapps.karnataka.gov.in/
ಸ್ನೇಹಿತರೆ ಇದೇ ರೀತಿ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳು ಬಗ್ಗೆ ಮಾಹಿತಿ ಹಾಗೂ ಇತರ ಅನೇಕ ವಿಷಯಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ವಾಟ್ಸಾಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜೋಯಿನ್ ಆಗಬಹುದು