KEA Health Department Recruitment 2026: ಆರೋಗ್ಯ ಇಲಾಖೆಯಲ್ಲಿ 1,505 ಹುದ್ದೆಗಳ ಬೃಹತ್ ನೇಮಕಾತಿ! ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮತ್ತು ಹೆಲ್ತ್ ಇನ್ಸ್ಪೆಕ್ಟರ್ಗೆ ವಿಶೇಷ ನಿಯಮಾವಳಿ ಪ್ರಕಟ
ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕೋರ್ಸ್ ಮುಗಿಸಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಕರ್ನಾಟಕದ ಯುವಜನತೆಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1,505 ಹುದ್ದೆಗಳ ಭರ್ತಿಗೆ ವೇದಿಕೆ ಸಿದ್ಧವಾಗಿದೆ.
ಈ ಬಹುನಿರೀಕ್ಷಿತ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ನಡೆಸಲು ತೀರ್ಮಾನಿಸಲಾಗಿದೆ.
ಇದಕ್ಕಾಗಿ ಸರ್ಕಾರ “(Special Recruitment Rules) ವಿಶೇಷ ನೇಮಕಾತಿ ನಿಯಮಗಳು – 2026” ಕರಡು ಅಧಿಸೂಚನೆಯನ್ನು (Draft notification) ಆಗಸ್ಟ್ 20ರಂದು ಅಧಿಕೃತ (Official) ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

ಹೊಸ ವಿಶೇಷ ನಿಯಮಗಳ ಅನ್ವಯ 1,205 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ (PHCO) ಹಾಗೂ 300 ಹೆಲ್ತ್ ಇನ್ಸ್ಪೆಕ್ಟಿಂಗ್ ಆಫೀಸರ್ (HIO) ಹುದ್ದೆಗಳನ್ನು ನೇರ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ತುಂಬಲಾಗುತ್ತದೆ.
ಲಿಖಿತ ಪರೀಕ್ಷೆ, ಪ್ರಾಕ್ಟಿಕಲ್ ಪರೀಕ್ಷೆ ಮಾತ್ರ ಇದ್ದು, ಮೌಖಿಕ ಸಂದರ್ಶನ ಇರುವುದಿಲ್ಲ. ಇದು ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಹಿನ್ನೆಲೆಯ ಯುವಕರಿಗೆ, ವಿಶೇಷವಾಗಿ ಮಹಿಳಾ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶ.
ಆರೋಗ್ಯ ಇಲಾಖೆ ನೇಮಕಾತಿ 2026: ಪ್ರಮುಖ ಮುಖ್ಯಾಂಶಗಳು
- ಇಲಾಖೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಕರ್ನಾಟಕ
- ಒಟ್ಟು ಹುದ್ದೆಗಳು: 1,505
- ಹುದ್ದೆಗಳು: ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ (PHCO) – 1,205 ಮತ್ತು ಹೆಲ್ತ್ ಇನ್ಸ್ಪೆಕ್ಟಿಂಗ್ ಆಫೀಸರ್ (HIO) – 300
- ವೇತನ ಶ್ರೇಣಿ: ₹37,500 ರಿಂದ ₹76,100
- ಪರೀಕ್ಷಾ ಪ್ರಾಧಿಕಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
- ಆಯ್ಕೆ ವಿಧಾನ: ಲಿಖಿತ ಪರೀಕ್ಷೆ (160 ಅಂಕ) + ಪ್ರಾಕ್ಟಿಕಲ್ ಪರೀಕ್ಷೆ (40 ಅಂಕ)
- ಸಂದರ್ಶನ: ಇಲ್ಲ
ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆ.?
1. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ (PHCO) – 1,205 ಹುದ್ದೆಗಳು
ಈ ಹುದ್ದೆಗಳನ್ನು ಕೇವಲ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಮೀಸಲಿಡಲಾಗಿದೆ. SSLC ಯಲ್ಲಿ ಉತ್ತೀರ್ಣರಾಗಿರಬೇಕು. ಜೂನಿಯರ್ ಹೆಲ್ತ್ ವರ್ಕರ್ (ANM) ತರಬೇತಿ ಅಥವಾ GNM ನರ್ಸಿಂಗ್ ಡಿಪ್ಲೊಮಾ, B.Sc ನರ್ಸಿಂಗ್ ಅಥವಾ ಸೈಕಿಯಾಟ್ರಿಕ್ ನರ್ಸಿಂಗ್ ಮುಗಿಸಿರಬೇಕು. ಕರ್ನಾಟಕ ನರ್ಸಿಂಗ್ ಕೌನ್ಸಿಲ್ (KNC) ನಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಸಿರಬೇಕು.
2. ಹೆಲ್ತ್ ಇನ್ಸ್ಪೆಕ್ಟಿಂಗ್ ಆಫೀಸರ್ (HIO) – 300 ಹುದ್ದೆಗಳು
SSLC ಪಾಸಾಗಿ JOC ಮಲ್ಟಿಪರ್ಪಸ್ ಬೇಸಿಕ್ ಹೆಲ್ತ್ ವರ್ಕರ್ ನ 2 ವರ್ಷಗಳ ಡಿಪ್ಲೊಮಾ, ಅಥವಾ ಪ್ಯಾರಾಮೆಡಿಕಲ್ ಬೋರ್ಡ್ನಿಂದ 3 ವರ್ಷದ ಹೆಲ್ತ್ ಇನ್ಸ್ಪೆಕ್ಟರ್ ಡಿಪ್ಲೊಮಾ, ಅಥವಾ PUC ವಿಜ್ಞಾನ (PCMB) ಜೊತೆಗೆ 2 ವರ್ಷದ ಹೆಲ್ತ್ ಇನ್ಸ್ಪೆಕ್ಟರ್ ಡಿಪ್ಲೊಮಾ, ಅಥವಾ GNM / B.Sc ನರ್ಸಿಂಗ್ ಪದವಿ ಹೊಂದಿರಬೇಕು. ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕ ಪಡೆದಿರುವುದು ಕಡ್ಡಾಯ.
ಯಸ್ಸಿನ ಮಿತಿ ಹಾಗೂ ಗುತ್ತಿಗೆ ನೌಕರರಿಗೆ ವಿಶೇಷ ರಿಯಾಯಿತಿ
ಸಾಮಾನ್ಯ ವಯೋಮಿತಿಗಿಂತ (than the normal age limit) ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ 3 ವರ್ಷಗಳ (years) ಹೆಚ್ಚುವರಿ ಸಡಿಲಿಕೆ (relaxation) ನೀಡಲಾಗಿದೆ. ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಅಥವಾ NHM/NRHM ಅಡಿಯಲ್ಲಿ ಕೆಲಸ ಮಾಡಿದ ಗುತ್ತಿಗೆ ನೌಕರರಿಗೆ ಪ್ರತಿ ವರ್ಷದ ಸೇವೆಗೆ 1 ವರ್ಷದಂತೆ ಗರಿಷ್ಠ 10 ವರ್ಷಗಳ ವಯೋಮಿತಿ ಸಡಿಲಿಕೆ ಸಿಗುತ್ತದೆ (ಗರಿಷ್ಠ ವಯಸ್ಸು 50 ವರ್ಷ ಮೀರಬಾರದು).
ಗುತ್ತಿಗೆ ನೌಕರರಿಗೆ ಪ್ರತಿ ಒಂದು ವರ್ಷದ ಸೇವೆಗೆ 1 ಅಂಕದಂತೆ ಗರಿಷ್ಠ 5 ಕೃಪಾಂಕಗಳನ್ನು ನೀಡಲಾಗುತ್ತದೆ. ಈ ಅಂಕಗಳನ್ನು ಪರೀಕ್ಷೆಯ ಒಟ್ಟು ಅಂಕಗಳಿಗೆ ಸೇರಿಸಿ ಮೆರಿಟ್ ಲಿಸ್ಟ್ ತಯಾರಿಸಲಾಗುತ್ತದೆ.
ಕೆಇಎ ಪರೀಕ್ಷಾ ಮಾದರಿ ಹಾಗೂ ಪಠ್ಯಕ್ರಮ
ಒಟ್ಟು 200 ಅಂಕಗಳ ಪರೀಕ್ಷೆ ನಡೆಯಲಿದೆ.
ಲಿಖಿತ ಪರೀಕ್ಷೆ (160 ಅಂಕ): ಸಂಪೂರ್ಣ ಬಹು ಆಯ್ಕೆಯ (MCQ) ಪ್ರಶ್ನೆಗಳು.
ಪತ್ರಿಕೆ-1 (80 ಅಂಕ): ತಾಯಿ ಮತ್ತು ಮಕ್ಕಳ ಆರೋಗ್ಯ, ರಾಷ್ಟ್ರೀಯ-ರಾಜ್ಯ ಆರೋಗ್ಯ ಕಾರ್ಯಕ್ರಮಗಳು, ಸಾಮಾನ್ಯ ಜ್ಞಾನ, ಸಾಮಾನ್ಯ ಇಂಗ್ಲಿಷ್, ಮೂಲಭೂತ ನರ್ಸಿಂಗ್ ಕಾನ್ಸೆಪ್ಟ್ಸ್.
ಪತ್ರಿಕೆ-2 (80 ಅಂಕ): ಸಮುದಾಯ ಆರೋಗ್ಯ (Community Health) ನರ್ಸಿಂಗ್, ಪ್ರೈಮರಿ ಹೆಲ್ತ್ ಕೇರ್ (Primary Health Care) ನರ್ಸಿಂಗ್, ಮನೋವಿಜ್ಞಾನ (Psychology), ನ್ಯೂಟ್ರಿಷನ್ & ಬಯೋಕೆಮಿಸ್ಟ್ರಿ, ಅನಾಟಮಿ & ಫಿಸಿಯಾಲಜಿ (Physiology), ಆರೋಗ್ಯ ಕೇಂದ್ರ ನಿರ್ವಹಣೆ.
ಪ್ರಾಕ್ಟಿಕಲ್ ಪರೀಕ್ಷೆ (40 ಅಂಕ): ಲಿಖಿತ ಪರೀಕ್ಷೆಯ ಅಂಕಗಳ ಆಧಾರದ ಮೇಲೆ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಕರೆಯಲಾಗುತ್ತದೆ. ಆರೋಗ್ಯ ಇಲಾಖೆಯಿಂದ OSCE (Objective Structured Clinical Examination) ಮಾದರಿಯಲ್ಲಿ ನಡೆಯುತ್ತದೆ.
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ (150 ಅಂಕ) ಇದ್ದು, ಕನಿಷ್ಠ 50 ಅಂಕ ಪಡೆದು ಪಾಸ್ ಆಗಬೇಕು. SSLCಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿದವರಿಗೆ ವಿನಾಯಿತಿ ಇದೆ. ಆಯ್ಕೆ ಸಮಿತಿ ಮುಖ್ಯ ಪಟ್ಟಿಯ ಜೊತೆಗೆ ಒಟ್ಟು ಹುದ್ದೆಗಳ 75% ಹೆಚ್ಚುವರಿ ಪಟ್ಟಿ (ವೇಟಿಂಗ್ ಲಿಸ್ಟ್) ಸಿದ್ಧಪಡಿಸಲಿದೆ.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಮುಖ್ಯ ಮಾಹಿತಿ
ಪ್ರಸ್ತುತ “ವಿಶೇಷ ನೇಮಕಾತಿ ನಿಯಮಗಳು – 2026” ಕರಡು ಅಧಿಸೂಚನೆ ಪ್ರಕಟವಾಗಿದೆ. ಸಂಪೂರ್ಣ ಅಧಿಸೂಚನೆ, ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕಗಳನ್ನು KEA ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ. ಅರ್ಜಿಗಳನ್ನು ಕೇವಲ ಆನ್ಲೈನ್ ಮೂಲಕವೇ ಸಲ್ಲಿಸಬೇಕಾಗುತ್ತದೆ.
ಅಧಿಕೃತ ವೆಬ್ಸೈಟ್ಗಳು:
KEA: https://cetonline.karnataka.gov.in/kea/
ಆರೋಗ್ಯ ಇಲಾಖೆ: https://hfwcom.karnataka.gov.in/
ಅಭ್ಯರ್ಥಿಗಳು ಈ ವೆಬ್ಸೈಟ್ಗಳನ್ನು ನಿಯಮಿತವಾಗಿ ಪರಿಶೀಲಿಸಿ, ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಲಿಂಕ್ ಬಂದ ಕೂಡಲೇ ಅರ್ಜಿ ಸಲ್ಲಿಸಬೇಕು.
ನೋಟಿಫಿಕೇಶನ್ PDF ಅನ್ನು KEA ಅಥವಾ ರಾಜ್ಯಪತ್ರದಲ್ಲಿ ಪ್ರಕಟವಾದ ನಂತರ ಡೌನ್ಲೋಡ್ ಮಾಡಿಕೊಳ್ಳಬಹುದು.
ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕೋರ್ಸ್ ಮುಗಿಸಿದ ಯುವಕರು, ವಿಶೇಷವಾಗಿ ಮಹಿಳೆಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.
ಪರೀಕ್ಷಾ ಪಠ್ಯಕ್ರಮವನ್ನು ಈಗಿನಿಂದಲೇ ಸಿದ್ಧಪಡಿಸಿಕೊಳ್ಳುವುದು ಉತ್ತಮ. ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಈ ಬೃಹತ್ ನೇಮಕಾತಿ ರಾಜ್ಯದ ಯುವಜನತೆಗೆ ಹೊಸ ನಂಬಿಕೆ ನೀಡಿದೆ.
ಕರ್ನಾಟಕದಲ್ಲಿ ಮತ್ತೆ ಮಳೆಯಾರ್ಭಟ: ಆಗಸ್ಟ್ 24ರವರೆಗೆ ಗುಡುಗು-ಮಿಂಚು, ಬಿರುಗಾಳಿ ಎಚ್ಚರಿಕೆ