Heavy Rains in Karnataka: ಜುಲೈ 13ರ ವರೆಗೆ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ! ಇಲ್ಲಿದೆ ನೋಡಿ IMD report
ನಮಸ್ಕಾರ ಸ್ನೇಹಿತರೆ ಭಾರತೀಯ ಹವಾಮಾನ ಇಲಾಖೆ (IMD) ಇದೀಗ ನಮ್ಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರೆಯಲಿದೆ ಎಂದು ಹೊಸ ವರದಿ ನೀಡಿದೆ, ಈ ವರದಿಯ ಪ್ರಕಾರ ನಮ್ಮ ಕರ್ನಾಟಕದಲ್ಲಿ ಮುಂದಿನ ಜುಲೈ 13ನೇ ತಾರೀಖಿನವರೆಗೆ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ,
ಆದ್ದರಿಂದ ನಾವು ಈ ಲೇಖನಿಯಲ್ಲಿ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆ ಆಗಲಿದೆ ಮತ್ತು ಯಾವ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂಬ ಮಾಹಿತಿ ಈ ಲೇಖನೆಯ ಮೂಲಕ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಲೇಖನಿಯನ್ನು ಆದಷ್ಟು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ
ರಾಜ್ಯದ 12 ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ..?
ಹೌದು ಸ್ನೇಹಿತರೆ ಭಾರತೀಯ ಹವಾಮಾನ ಇಲಾಖೆ ಇದೀಗ ನಮ್ಮ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದು ಮಂಗಳವಾರದಿಂದ ಧಾರಾಕಾರ ಮಳೆ ಆಗುವ ಮುನ್ಸೂಚನೆ ನೀಡಿದೆ, IMD ನೀಡಿರುವ ರಿಪೋರ್ಟ್ ಪ್ರಕಾರ ಮುಂದಿನ ಐದು ದಿನಗಳವರೆಗೆ ಅಂದರೆ ಜುಲೈ 13 ನೇ ತಾರೀಖಿನವರೆಗೆ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಹಾಗಾಗಿ ನಾವು ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಆಗಲಿದೆ ಹಾಗೂ ಮಳೆಯ ಪ್ರಭಾವದಿಂದ ಶಾಲಾ-ಕಾಲೇಜುಗಳು ರಜೆ ಇರುತ್ತದೆ ಅಥವಾ ಇಲ್ಲ ಎಂಬ ಮಾಹಿತಿಯನ್ನು ತಿಳಿಯೋಣ
ಬಂತು ಪಡಿತರ ಚೀಟಿ ಹೊಂದಿದವರಿಗೆ ಹೊಸ ಅಪ್ಡೇಟ್ ಇಲ್ಲಿದೆ ನೋಡಿ ತಕ್ಷಣ ಮಾಹಿತಿ ಓದಿ
ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ..?
ಹೌದು ಸ್ನೇಹಿತರೆ ಭಾರತದ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ನಮ್ಮ ಕರ್ನಾಟಕದ ಕರಾವಳಿ ಭಾಗಗಳಲ್ಲಿ ಅಂದರೆ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ, ಉಡುಪಿ ಮತ್ತು ಇತರ ಭಾಗಗಳಲ್ಲಿ ಇಂದು ಮಂಗಳವಾರದಿಂದ ಧಾರಾಕಾರ ಮಳೆ ಆಗಲಿದೆ ಎಂದು IMD ರಿಪೋರ್ಟ್ ನೀಡಿದೆ.
ಇಷ್ಟೇ ಅಲ್ಲದೆ ನಮ್ಮ ಕರ್ನಾಟಕದ ಉತ್ತರ ಒಳನಾಡು ಹಾಗೂ ಮಲೆನಾಡು ಭಾಗಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ, imd ನೀಡಿರುವ ಮಾಹಿತಿಯ ಪ್ರಕಾರ ಕೊಡಗು, ಚಿಕ್ಕಮಂಗಳೂರು, ಶಿವಮೊಗ್ಗ, ಹಾಸನ ಮತ್ತು ಇತರ ಭಾಗಗಳಲ್ಲಿ ಭರ್ಜರಿ ಮಳೆ ಆಗಲಿದೆ ಎಂದು ಮಾಹಿತಿ ತಿಳಿಸಿದೆ.
ಇದರ ಜೊತೆಗೆ IMD ನೀಡಿರುವ ಮಾಹಿತಿಯ ಪ್ರಕಾರ ಬೆಳಗಾವಿ ಜಿಲ್ಲೆಯ ಭಾಗಗಳಲ್ಲಿ ತೀವ್ರ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ ಹಾಗೂ ಈ ಭಾಗದವರಿಗೆ ಎಲ್ಲೋ ಅಲರ್ಟ್ ನೀಡಲಾಗಿದೆ.
ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಇತರ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು IMD ಮಾಹಿತಿ ತಿಳಿಸಿದೆ,
ಹಾಗಾಗಿ ಮುಂದಿನ ಐದು ದಿನಗಳವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಭರ್ಜರಿ ಮಳೆ ಆಗಲಿದೆ ಇದರಿಂದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಶಾಲಾ-ಕಾಲೇಜುಗಳು ರಜೆ ಘೋಷಣೆ ಮಾಡುವ ಸಾಧ್ಯತೆ ಹೆಚ್ಚು ಕಾಣುತ್ತಿದೆ.
ಆದರೆ ನೀವು ಅಲ್ಲಿನ ಜಿಲ್ಲಾಡಳಿತ ನೀಡಿರುವ ಮಾಹಿತಿಯನ್ನು ಸ್ಪಷ್ಟಪಡಿಸಿಕೊಳ್ಳಿ ಏಕೆಂದರೆ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಅಧಿಕಾರ ಅಲ್ಲಿನ ಜಿಲ್ಲಾಡಳಿತಕ್ಕೆ ಇರುತ್ತದೆ ಹಾಗಾಗಿ ನೀವು ಜಿಲ್ಲಾಡಳಿತ ಹೊರಡಿಸಿರುವ ಅಧಿಕೃತ ಅಧಿಸೂಚನೆ ಮಾತ್ರ ಸ್ಪಷ್ಟ ಮಾಹಿತಿ ಎಂದು ತಿಳಿದುಕೊಳ್ಳಿ
BOB Recruitment 2025: ಬ್ಯಾಂಕ್ ಆಫ್ ಬರೋಡ ಹೊಸ ನೇಮಕಾತಿ! ತಕ್ಷಣ ಖಾಲಿ ಹುದ್ದೆಗಳಿಗೆ ಈ ರೀತಿ ಅಪ್ಲೈ ಮಾಡಿ