HDFC ಬ್ಯಾಂಕ್ ಪರಿವರ್ತನ ಸ್ಕಾಲರ್ಶಿಪ್ 2025; – 1ನೇ ತರಗತಿಯಿಂದ ಪದವಿ ವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ₹75,000/- ವರೆಗೆ ಸ್ಕಾಲರ್ ಸಿಗುತ್ತೆ
ನಮಸ್ಕಾರ ಗೆಳೆಯರೇ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇದೀಗ ಹೆಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ಒಂದು ಸಿಹಿ ಸುದ್ದಿ, ಹೌದು ಗೆಳೆಯರೇ ಹೆಚ್ ಡಿ ಎಫ್ ಸಿ ಬ್ಯಾಂಕ್ ECSS ಕಾರ್ಯಕ್ರಮದ ಮೂಲಕ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಸುಮಾರು 75,000 ವರೆಗೆ ಸ್ಕಾಲರ್ಶಿಪ್ ನೀಡುತ್ತಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ಯೋಜನೆಗೆ ಸಂಬಂಧಿಸಿದೆ ಸಂಪೂರ್ಣ ವಿವರ ಹಾಗೂ ಯಾವ ವಿದ್ಯಾರ್ಥಿಗಳಿಗೆ ಎಷ್ಟು ಹಣ ಸಿಗುತ್ತೆ ಎಂಬ ವಿವರವನ್ನು ತಿಳಿದುಕೊಳ್ಳೋಣ
HDFC ಬ್ಯಾಂಕ್ ಪರಿವರ್ತನ ಸ್ಕಾಲರ್ಶಿಪ್ 2025..?
ಸ್ನೇಹಿತರೆ ನಮ್ಮ ದೇಶದ ಬ್ಯಾಂಕುಗಳಲ್ಲಿ ಅತಿ ದೊಡ್ಡ ಪ್ರೈವೇಟ್ ಬ್ಯಾಂಕ್ ಯಾವುದು ಎಂದರೆ ಅದು ಎಚ್ ಡಿ ಎಫ್ ಸಿ ಬ್ಯಾಂಕ್ ಆಗಿದೆ ಈ ಒಂದು ಬ್ಯಾಂಕ್ ಇದೀಗ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮತ್ತು ಉನ್ನತ ಶಿಕ್ಷಣ ಪಡೆಯಲು ಬಯಸುವಂತಹ ವಿದ್ಯಾರ್ಥಿಗಳಿಗೆ ECSS ಕಾರ್ಯಕ್ರಮದ ಮೂಲಕ ಅಥವಾ ಎಚ್ ಡಿ ಎಫ್ ಸಿ ಫೌಂಡೇಶನ್ ವತಿಯಿಂದ ಬರೋಬ್ಬರಿ ವಿದ್ಯಾರ್ಥಿಗಳಿಗೆ 75 ಸಾವಿರದವರೆಗೆ ವಿದ್ಯಾರ್ಥಿ ವೇತನ ನೀಡುವ ಸ್ಕಾಲರ್ಶಿಪ್ ಪ್ರೋಗ್ರಾಮ್ ಬಿಡುಗಡೆ ಮಾಡಿದೆ

ಹೌದು ಗೆಳೆಯರೇ ಎಚ್ ಡಿ ಎಫ್ ಸಿ ಬ್ಯಾಂಕ್ ನೀಡುತ್ತಿರುವ ಈ ಪರಿವರ್ತನಾ ಸ್ಕಾಲರ್ಶಿಪ್ ಯೋಜನೆಗೆ ವಿದ್ಯಾರ್ಥಿಗಳು ಬೇಗ ಅರ್ಜಿ ಸಲ್ಲಿಕೆ ಮಾಡಬೇಕು ಏಕೆಂದರೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 4 ಸೆಪ್ಟೆಂಬರ್ 2025 ನಿಗದಿ ಮಾಡಿದೆ ಹಾಗಾಗಿ ನಾವು ಈ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳಿಗೆ ಸಂಬಂಧಿಸಿದ ವಿವರ ತಿಳಿಯೋಣ ಮತ್ತು ಯಾವ ವಿದ್ಯಾರ್ಥಿಗಳಿಗೆ ಎಷ್ಟು ಸ್ಕ್ವೇರ್ ಸಿಗುತ್ತೆ ಎಂಬ ವಿವರವನ್ನು ತಿಳಿಸಿಕೊಡುತ್ತೇವೆ
ಎಚ್ ಡಿ ಎಫ್ ಸಿ ಬ್ಯಾಂಕ್ ಪರಿವರ್ತನ ಸ್ಕೂಲ್ ಯೋಜನೆಗೆ ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು..?
ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ECSS ಕಾರ್ಯಕ್ರಮದ ಅಡಿಯಲ್ಲಿ ಎಚ್‌ಡಿಎಫ್‍ಸಿ ಫೌಂಡೇಶನ್ ಮೂಲಕ ಪರಿವರ್ತನಾ ಸ್ಕಾಲರ್ಶಿಪ್ ಯೋಜನೆ ಬಿಡುಗಡೆ ಮಾಡಲಾಗಿದ್ದು ಈ ಒಂದು ಯೋಜನೆಗೆ ಸರ್ಕಾರಿ ಹಾಗೂ ಸರಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು
ಹೌದು ಗೆಳೆಯರೇ, ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಒಂದನೇ ತರಗತಿಯಿಂದ 12ನೇ ತರಗತಿ ವಿದ್ಯಾರ್ಥಿಗಳು ಹಾಗೂ ಇತರ ಯಾವುದೇ ಪದವಿ ಹಾಗೂ ವೃತ್ತಿಪರ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು
ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು..?
- ವಿದ್ಯಾರ್ಥಿಗಳು ಪ್ರಸ್ತುತ ವರ್ಷದಲ್ಲಿ ಖಾಸಗಿ ಅಥವಾ ಸರ್ಕಾರಿ ಅಥವಾ ಇತರ ಅನುದಾನಿತ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರಬೇಕು
- ವಿದ್ಯಾರ್ಥಿಗಳು ಇಂದಿನ ತರಗತಿಯಲ್ಲಿ ಕನಿಷ್ಠ 55% ಗಿಂತ ಹೆಚ್ಚಿನ ಅಂಕ ಪಡೆದಿರಬೇಕು
- 2.5 ಲಕ್ಷ ರೂಪಾಯಿಗಿಂತ ಕುಟುಂಬದ ವಾರ್ಷಿಕ ಆದಾಯ ಕಡಿಮೆ ಇರಬೇಕು
- ಕಳೆದ ಮೂರು ವರ್ಷಗಳಿಂದ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳ ಕುಟುಂಬವು ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿರಬೇಕು
- ಈ ಒಂದು ವಿದ್ಯಾರ್ಥಿ ವೇತನಕ್ಕೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ
ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್ಶಿಪ್ ಮೊತ್ತ (HDFC ಬ್ಯಾಂಕ್ ಪರಿವರ್ತನ ಸ್ಕಾಲರ್ಶಿಪ್ 2025).?
- ₹15,000 ದವರೆಗೆ ವಿದ್ಯಾರ್ಥಿ (Scholarship) ವೇತನ 1 ರಿಂದ 6ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು
- ₹18,000/- ವರೆಗೆ ವಿದ್ಯಾರ್ಥಿ ವೇತನ 7ನೇ ತರಗತಿಯಿಂದ 12ನೇ ತರಗತಿ ಹಾಗೂ ಐಟಿಐ ಮತ್ತು ಡಿಪ್ಲೋಮೋ ಹಾಗೂ ಪಾಲಿಟೆಕ್ನಿಕ್ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು
- ₹30,000/- ವರೆಗೆ ವಿದ್ಯಾರ್ಥಿ (Scholarship) ವೇತನ ಯಾವುದೇ ಸಾಮಾನ್ಯ ಪದವಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು
- ₹35,000/- ವರೆಗೆ ಸ್ಕಾಲರ್ಶಿಪ್ ಸಾಮಾನ್ಯ ಸ್ನಾರ್ಥಕೋತರ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು
- ₹50,000/- ವರೆಗೆ ಸ್ಕಾಲರ್ಶಿಪ್ ಸಾಮಾನ್ಯ ವೃತ್ತಿಪರ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು
- ₹75,000/- ವರೆಗೆ ಯಾವುದೇ ವೃತ್ತಿಪರ ಸ್ನಾತಕೋತ್ತರ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪಡೆದುಕೊಳ್ಳಬಹುದು
ಅರ್ಜಿ ಸಲ್ಲಿಸುವುದು ಹೇಗೆ..?
ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ನೀಡುತ್ತಿರುವ ಪರಿವರ್ತನ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಮೊದಲು ಈ ಒಂದು ಯೋಜನೆಯ ಕುರಿತು ಇನ್ನಷ್ಟು ವಿವರವನ್ನು ಅಧಿಕೃತ ವೆಬ್ಸೈಟ್ ಮೂಲಕ ತಿಳಿದುಕೊಳ್ಳಿ ನಂತರ ಕೆಳಗಡೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಕೊನೆಯ ದಿನಾಂಕದ ಒಳಗಡೆ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 04/09/2025
ಸ್ನೇಹಿತರ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರಕಾರದ ಯೋಜನೆಗಳ ಬಗ್ಗೆ ತಕ್ಷಣ ಮಾಹಿತಿ ಪಡೆಯಲು
ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಭೇಟಿ ನೀಡಬಹುದು
ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಪ್ರಾರಂಭ.! New BPL Ration Card Application 2025









