Gruhalakshmi Scheme News: ಮಹಿಳೆಯರ ಗಮನಕ್ಕೆ, ಗೃಹಲಕ್ಷ್ಮಿ ಯೋಜನೆಯ ಎಷ್ಟು ಕಂತು ಹಣ ಜಮಾ ಆಗಿದೆ, ಬಾಕಿ ಕಂತಿನ ಹಣ ಎಷ್ಟು.?
ನಮಸ್ಕಾರ ಗೆಳೆಯರೇ ಗೃಹಲಕ್ಷ್ಮಿ ಯೋಜನೆ ನಮ್ಮ ಕರ್ನಾಟಕದಲ್ಲಿ ಒಂದು ಜನಪ್ರಿಯ ಯೋಜನೆಯಾಗಿದೆ, ಈ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣ ಜಮಾ ಮಾಡಲಾಗುತ್ತಿದೆ. ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಇಲ್ಲಿವರೆಗೂ ಮಹಿಳೆಯರಿಗೆ ಎಷ್ಟು ಕಂತಿನ ಹಣ ಜಮಾ ಆಗಿದೆ ಮತ್ತು ಎಷ್ಟು ಕಂತಿನ ಹಣ ಬಾಕಿ ಇದೆ ಎಂಬ ವಿವರವನ್ನು ತಿಳಿದುಕೊಳ್ಳೋಣ..
ಗೃಹಲಕ್ಮಿ ಯೋಜನೆ ಎಂದರೆ ಏನು (Gruhalakshmi Scheme News).?
ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಉದ್ದೇಶದಿಂದ ಜನರಿಗೆ 5 ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಭರವಸೆ ನೀಡಿತ್ತು ಅದೇ ರೀತಿ ನಮ್ಮ ಕರ್ನಾಟಕದಲ್ಲಿ 2023ರಲ್ಲಿ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ, ಅಧಿಕಾರಕ್ಕೆ ಬಂದ ನಂತರ ಆರು ತಿಂಗಳ ಒಳಗಡೆ ಐದು ಗ್ಯಾರಂಟಿಗಳು ಜನರಿಗೆ ನೀಡುವುದಾಗಿ ಘೋಷಣೆ ಮಾಡಿತ್ತು, ಈ ಗ್ಯಾರೆಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು ಗ್ಯಾರಂಟಿ ಯೋಜನೆಯಾಗಿದೆ

ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು ರೂ.2000 ಹಣ ಹಾಕುವ ಯೋಜನೆಯಾಗಿದೆ, ಹೌದು ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರ ಖಾತೆಗೆ ನೇರವಾಗಿ DBT ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ. ಇಲ್ಲಿವರೆಗೂ ಮಹಿಳೆಯರು ಸುಮಾರು 22ನೇ ಕಂತಿನ ಹಣ ಅಂದರೆ ಮೇ ತಿಂಗಳ ಬಾಕಿ ಹಣ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು.
ಆದ್ದರಿಂದ ತುಂಬಾ ಮಹಿಳೆಯರಿಗೆ ಒಂದು ಗೊಂದಲ ಕಾಡುತ್ತಿದೆ ಅದು ಏನಪ್ಪಾ ಅಂದರೆ ಇಲ್ಲಿವರೆಗೂ ಮಹಿಳೆಯರ ಖಾತೆಗೆ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂದು ಮಾಹಿತಿ ಸರಿಯಾಗಿ ತಿಳಿದಿಲ್ಲ.! ಹಾಗಾಗಿ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈಗ ತಿಳಿಯೋಣ
ಇಲ್ಲಿವರೆಗೂ ಗೃಹಲಕ್ಷ್ಮಿ ಯೋಜನೆಯ ಎಷ್ಟು ಕಂತು ಹಣ ಜಮಾ ಆಗಿದೆ (Gruhalakshmi Scheme News).?
ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಇಲ್ಲಿವರೆಗೂ ಮಹಿಳೆಯರು ಸರಿ ಸುಮಾರು 22ನೇ ಕಂತಿನ ಅಂದರೆ ಮೇ 2025 ರ ಕಂತಿನ ದೀಪಾವಳಿ ಹಬ್ಬದ ಪ್ರಯುಕ್ತ, 20 ಅಕ್ಟೋಬರ್ 2025 ರಂದು ಬಿಡುಗಡೆ ಮಾಡಲಾಯಿತು, ಹಾಗಾಗಿ ಇಲ್ಲಿವರೆಗೂ ಸುಮಾರು 22ನೇ ಕಂತಿನ ಹಣ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು..!
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಅರ್ಜಿ 19 ಜುಲೈ 2023 ರಂದು ಪ್ರಾರಂಭಿಸಲಾಯಿತು ಹಾಗೂ ಹಣ 30 ಆಗಸ್ಟ್ 2023 ರಂದು ಮೊದಲ ಕಂತಿನ ಹಣ ಬಿಡುಗಡೆ ಮಾಡಲಾಯಿತು, ಅಂದರೆ 20 ಆಗಸ್ಟ್ 2025ಕ್ಕೆ ಬರೋಬ್ಬರಿ 24 ಕಂತಿನ ಹಣ ಆಗುತ್ತದೆ. ಹಾಗಾಗಿ ಇಲ್ಲಿವರೆಗೂ ಎಷ್ಟು ಕಂತಿನ ಹಣ ಬಾಕಿ ಇದೆ ಎಂಬ ಮಾಹಿತಿ ತಿಳಿಯೋಣ
- ಮೇ 22ನೇ ಕಂತಿನ ಹಣ: ರೂ.2000 ಬಿಡುಗಡೆ ಮಾಡಲಾಗಿದೆ.
- ಜೂನ್ 23ನೇ ಕಂತಿನ ಹಣ: ರೂಪಾಯಿ 2000 ಬಿಡುಗಡೆ ಮಾಡುವುದು ಬಾಕಿ ಇದೆ.
- ಜುಲೈ 24 ನೇ ಕಂತಿನ ಹಣ: ರೂ.2000 ಶೀಘ್ರದಲ್ಲೇ ಬಿಡುಗಡೆ ದಿನಾಂಕ ಪ್ರಕಟಣೆ
- ಆಗಸ್ಟ್ 25ನೇ ಕಂತಿನ ಹಣ: ರೂ.2000 ಹಣ ಬಿಡುಗಡೆಯ ದಿನಾಂಕ ಶೀಘ್ರದಲ್ಲೇ ಪ್ರಕಟಣೆ
- ಸೆಪ್ಟೆಂಬರ್ 26ನೇ ಕಂತಿನ ಹಣ: ರೂ.2000 ಹಣ ಶೀಘ್ರದಲ್ಲಿ ಬಿಡುಗಡೆಯ ದಿನಾಂಕ ಪ್ರಕಟಣೆ
- ಅಕ್ಟೋಬರ್ 27 ನೇ ಕಂತಿನ ಹಣ: ರೂ.2000 ಶೀಘ್ರದಲ್ಲೇ ಬಿಡುಗಡೆಯ ದಿನಾಂಕ ಪ್ರಕಟಣೆ
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಇಲ್ಲಿವರೆಗೂ ಸುಮಾರು 22ನೇ ಕಂತಿನ ಜಮಾ ಆಗಿದೆ ಹಾಗೂ ಮಹಿಳೆಯರಿಗೆ ಇನ್ನೂ 23 ಮತ್ತು 24 ಹಾಗೂ 25ನೇ ಕಂತಿನ ಹಣ ಬಾಕಿ ಇದೆ ಇದರ ಜೊತೆಗೆ ಅಕ್ಟೋಬರ್ ತಿಂಗಳ ಕಂತಿನ ಹಣ ಬಾಕಿ ಇದೆ, ಒಟ್ಟಾರೆ ನೋಡುವುದಾದರೆ ಮಹಿಳೆಯರಿಗೆ ಇನ್ನೂ ಐದು ಕಂತಿನ ಹಣ ಬಾಕಿ ಇದೆ.
ಈ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಪ್ರಶ್ನೆ ಮಾಡಿದರೆ ನಾವು ಆಗಸ್ಟ್ ತಿಂಗಳ ಹಣವನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ಆದರೆ ನಮಗೆ ಮಾಹಿತಿ ತಿಳಿದಿರುವ ಪ್ರಕಾರ ಇಲ್ಲಿವರೆಗೂ ಸುಮಾರು 22ನೇ ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿ ಸಾಕಷ್ಟು ಮಹಿಳೆಯರು ತಿಳಿಸಿದ್ದಾರೆ ಹಾಗಾಗಿ ನಿಮಗೆ ಇಲ್ಲಿವರೆಗೂ ಎಷ್ಟು ಕಂತಿನ ಹಣ ಬಾಕಿ ಇದೆ ಹಾಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಬಹುದು
ವಿಶೇಷ ಸೂಚನೆ: ಗೃಹಲಕ್ಷ್ಮಿ ಯೋಜನೆ, ಬಾಕಿ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ನಾವು ನಮಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಅಂದರೆ ಇತರ ಮಾಧ್ಯಮಗಳ ಮಾಹಿತಿ ಆಧಾರದ ಮೇಲೆ ಹಾಗೂ ಕೆಲವು ವೆಬ್ಸೈಟ್ ನೀಡಿರುವ ಮಾಹಿತಿಗಳ ಆಧಾರದ ಮೇಲೆ ಈ ಒಂದು ಲೇಖನವನ್ನು ಪ್ರಕಟಣೆ ಮಾಡಿದ್ದೇವೆ ಹಾಗಾಗಿ ನಿಮಗೆ ಇನ್ನಷ್ಟು ನಿಖರ ಮತ್ತು ಖಚಿತ ಮಾಹಿತಿ ಬೇಕಾದರೆ ಕರ್ನಾಟಕ ಮಾಹಿತಿ ಕಣಜ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಬಹುದು
ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟವಾದರೆ ಹಾಗೂ ಈ ಮಾಹಿತಿ ನಿಮಗೆ ನಿಖರವೆನಿಸಿದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಬಹುದು.
ಹಾಗೂ ಈ ಮಾಹಿತಿಯನ್ನು ಆದಷ್ಟು ನಿಮ್ಮ ಸ್ನೇಹಿತರು ಮತ್ತು ಮಹಿಳಾ ಫಲಾನುಭವಿಗಳಿಗೆ ಶೇರ್ ಮಾಡಿ









