Government Free Housing Scheme – ಸ್ವಂತ ಮನೆ ಇಲ್ಲದವರು ಉಚಿತ ಮನೆ ಯೋಜನೆಗೆ ಅರ್ಜಿ ಹಾಕಿ.! ಇಲ್ಲಿದೆ ನೋಡಿ ವಿವರ
ನಮಸ್ಕಾರ ಗೆಳೆಯರೇ ಇದೀಗ ಸ್ವಂತ ಮನೆ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ.! ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ವತಿಯಿಂದ 1.80 ಲಕ್ಷಕ್ಕಿಂತ ಹೆಚ್ಚು ಮನೆಗಳನ್ನು 2026 ರ ಒಳಗಡೆ ವಿತರಣೆ ಮಾಡಲು ಸರಕಾರ ದೊಡ್ಡ ಹೆಜ್ಜೆ ಇಡುತ್ತಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ಸ್ವಂತ ಮನೆ ಪಡೆಯಲು ಯಾರು ಯಾವ ಯೋಜನೆ ಮೂಲಕ ಮನೆಗಳು ವಿತರಣೆ ಮಾಡಲಾಗುತ್ತಿದೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರವನ್ನು ತಿಳಿದುಕೊಳ್ಳೋಣ
1.80 ಲಕ್ಷಕ್ಕಿಂತ ಹೆಚ್ಚು ಮನೆಗಳ ವಿತರಣೆ…?
ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಇದೆ ಈಗ ಒಂದು ದೊಡ್ಡ ಹೆಜ್ಜೆ ಇಡಲು ಮುಂದಾಗಿದೆ ಅದು ಏನು ಅಂದರೆ ಡಿಸೆಂಬರ್ 2026ರ ಒಳಗಡೆ 1,80,253 ಮನೆಗಳನ್ನು ನಿರ್ಮಾಣ ಮಾಡಿ ಮನೆ ಇಲ್ಲದಂತ ಕುಟುಂಬಗಳಿಗೆ ಸ್ವಂತ ಮನೆ ವಿತರಣೆ ಮಾಡಲು (Government) ಸರ್ಕಾರ ಹೊಸ ಗ್ಯಾರಂಟಿ ಯೋಜನೆಯನ್ನು (Scheme) ಹಮ್ಮಿಕೊಂಡಿದೆ ಈ ಬಗ್ಗೆ ವಸತಿ ಸಚಿವರಾದಂತ (Home Scheme) ಸಚಿವ ಜಮೀರ್ ಅಹ್ಮದ್ ಖಾನ್ ಅವರು ವಿಧಾನಸಭೆಯಲ್ಲಿ ಜನರಿಗೆ ಭರವಸೆ ನೀಡಿದ್ದಾರೆ

ಈ ಯೋಜನೆಗಳ ಮೂಲಕ ಮನೆ ನಿರ್ಮಾಣ ಮಾಡುವವರಿಗೆ ಗುಡ್ ನ್ಯೂಸ್ (Government Free Housing Scheme)..?
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿಧಾನಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಮನೆ ನಿರ್ಮಾಣ ಮಾಡುತ್ತಿರುವ ಫಲಾನುಭವಿಗಳಿಗೆ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮನೆ ನಿರ್ಮಾಣ ಮಾಡುತ್ತಿರುವ ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ..
ಸಚಿವರು ತಿಳಿಸಿರುವ ಮಾಹಿತಿಯ ಪ್ರಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣ ಮಾಡುತ್ತಿರುವ ಮನೆಗಳು ನಿಧಾನಗತಿಯಲ್ಲಿ ಪ್ರಗತಿ ಕಾಣುತ್ತಿವೆ ಇದಕ್ಕೆ ಕಾರಣ ಏನೆಂದರೆ ಸರ್ಕಾರ ಆರ್ಥಿಕವಾಗಿ ಹಣ ಪಾವತಿ ಮಾಡೋದು ಸ್ವಲ್ಪ ತಡವಾದ ಕಾರಣ ಮನೆಗಳು ನಿರ್ಮಾಣ ತಡವಾಗುತ್ತಿದೆ ಹಾಗಾಗಿ ಮನೆ ನಿರ್ಮಾಣ ಮಾಡಲು ಹಣ ಬಿಡುಗಡೆ ಮಾಡಲು ಮಹತ್ವ ತೀರ್ಮಾನ ಕೈಗೊಂಡಿದೆ ಎಂದು ಮಾಹಿತಿ ತಿಳಿಸಿದ್ದಾರೆ
ಅವರು ತಿಳಿಸಿರುವ ಮಾಹಿತಿಯ ಪ್ರಕಾರ ಮೊದಲ ಹಂತದಲ್ಲಿ 500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಹಾಗೂ ಇದರಿಂದ ಸುಮಾರು 36,783 ಮನೆಗಳಿಗೆ ಈ ಹಣವನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ ಹಾಗೂ ಎರಡನೇ ಹಂತದಲ್ಲಿ 40,345 ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗುತ್ತದೆ ಹಾಗೂ 2026ರ ಒಳಗಡೆ ಸುಮಾರು 1.80 ಲಕ್ಷಕ್ಕಿಂತ ಹೆಚ್ಚು ಮನೆಗಳ ನಿರ್ಮಾಣ ಕಾರ್ಯ ಗೊಳಿಸಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ
ಇದರ ಜೊತೆಗೆ ರಾಜುಗಾಂಧಿ ವಸತಿ ಯೋಜನೆಯ ಮೂಲಕವೂ ಕೂಡ ಸುಮಾರು 47,870 ಮನೆಗಳ ನಿರ್ಮಾಣ ನಿಧಾನ ಗತಿಯಲ್ಲಿ ಸಾಗುತ್ತಿದ್ದು ಈ ಮನೆಗಳ ನಿರ್ಮಾಣಕ್ಕೆ ಸರಕಾರ ಖರ್ಚು ವೆಚ್ಚಗಳನ್ನು ಬರಿಸಲಿದ್ದು ಇದೀಗ ಸರಕಾರದ ತಾತ್ವಿಕ ಒಪ್ಪಿಗೆ ಮಾತ್ರ ಸಿಕ್ಕಿದೆ ಶೀಘ್ರದಲ್ಲೇ ಸಚಿವ ಸಂಪುಟದ ಒಪ್ಪಿಗೆ ಪಡೆದು ಈ ಮನೆಗಳನ್ನು ಬೇಗ ನಿರ್ಮಾಣ ಮಾಡಲಿದ್ದೇವೆ ಎಂದು ಮಾಹಿತಿ ತಿಳಿಸಿದ್ದಾರೆ
ಈ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬೇಕು..?
ಸ್ನೇಹಿತರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣ ಮಾಡುವ ಮನೆಗಳಿಗೆ ಹಾಗೂ ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಮೊದಲು ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ ಹಾಗಾಗಿ ಹೆಚ್ಚಿನ ವಿವರ ಪಡೆದುಕೊಳ್ಳಲು ಈ ಯೋಜನೆಗಳ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
ಪ್ರಧಾನ ಮಂತ್ರಿ ಆವಾಸ್ ಯೋಜನೆ ಯ ಬಗ್ಗೆ ಮಾಹಿತಿ ಪಡೆಯಲು ಅಧಿಕೃತ ವೆಬ್ ಸೈಟ್ ಲಿಂಕ್:- ಇಲ್ಲಿ ಕ್ಲಿಕ್ ಮಾಡಿ
ಕೊಳಗೇರಿ ಅಭಿವೃದ್ಧಿ ಮಂಡಳಿ ಉಚಿತ ಮನೆ ವಿತರಣೆ ಬಗ್ಗೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಲು:- ಇಲ್ಲಿ ಕ್ಲಿಕ್ ಮಾಡಿ
ರಾಜೀವ್ ಗಾಂಧಿ ವಸತಿ ಯೋಜನೆಯ ಬಗ್ಗೆ ಅಧಿಕೃತ ಮಾಹಿತಿ ಪಡೆಯಲು ಅಧಿಕೃತ ವೆಬ್ ಸೈಟ್ ಲಿಂಕ್:- ಇಲ್ಲಿ ಕ್ಲಿಕ್ ಮಾಡಿ
ಇದೇ ರೀತಿ ನಿಮಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಆಸಕ್ತಿ ಇದ್ದರೆ ನೀವು
ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು