Free Bus Scheme: ಇನ್ಮುಂದೆ ಪುರುಷರಿಗೂ ಉಚಿತ ಬಸ್ ಪ್ರಯಾಣ! ಶಕ್ತಿ ಯೋಜನೆ ಹೊಸ ಅಪ್ಡೇಟ್,
ನಮ್ಮ ರಾಜ್ಯದಲ್ಲಿ ಇದೀಗ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ, ಶಕ್ತಿ ಯೋಜನೆ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಜನಪ್ರಿಯ ಪಡೆದುಕೊಂಡಿದೆ,
ಕರ್ನಾಟಕ ರಾಜ್ಯದಲ್ಲಿ ಇದೀಗ ಶಕ್ತಿ ಯೋಜನೆಯ ರಾಜ್ಯ ಸರ್ಕಾರದ ಎಲ್ಲಾ ಸರ್ಕಾರಿ ನಿಗಮಗಳ ಅಡಿಯಲ್ಲಿ ಬರುವಂತ ಬಸ್ಸುಗಳಲ್ಲಿ ಕೆ ಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿ ಹಾಗೂ ಕೆಕೆಆರ್‌ಟಿಸಿ, ಏನ್ ಡಬ್ಲ್ಯೂ ಕೆ ಆರ್ ಟಿ ಸಿ ಮುಂತಾದ ನಿಗಮಗಳಲ್ಲಿ ಇದೀಗ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು.

ಇದೀಗ ಪುರುಷರಿಗೂ ಕೂಡ ಉಚಿತ ಪ್ರಯಾಣ ಕಲ್ಪಿಸಲು ಸರ್ಕಾರ ಮನಸು ಮಾಡಿದೆ ಎಂಬ ಮಾತು ಕೊಪ್ಪಳದ ಯಲಬುರ್ಗದಲ್ಲಿ ನಡೆದಂತ ಕಾರ್ಯಕ್ರಮ ಒಂದರಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ಅವರು ಈ ಕುರಿತು ಮಹತ್ವದ ಅಪ್ಡೇಟ್ ನೀಡಿದ್ದಾರೆ ಎಂದು ಹೇಳಬಹುದು
ಬಸವರಾಜ್ ರಾಯರೆಡ್ಡಿ ರಾಜ್ಯದ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರ ಪಟ್ಟಿಯಲ್ಲಿ ಇವರು ಪ್ರಮುಖ ಪಾತ್ರ ವಹಿಸುತ್ತಾರೆ. ಇವರು ಕಾರ್ಯಕ್ರಮದ ಒಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಪುರುಷರಿಗೂ ಕೂಡ ಉಚಿತ ಪ್ರಯಾಣ ಘೋಷಣೆ ಮಾಡಲು ರಾಜ್ಯ ಸರ್ಕಾರ ಚಿಂತನೆ ಮಾಡುತ್ತಿದೆ ಎಂದು ಮಾಹಿತಿ ತಿಳಿಸಿದ್ದಾರೆ.
ಅವರು ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದ ಆರ್ಥಿಕ ಸ್ಥಿತಿ ಇನ್ನಷ್ಟು ಬಲವಾದರೆ ಗಂಡು ಮಕ್ಕಳಿಗೂ ಕೂಡ ಉಚಿತ ಬಸ್ ಪ್ರಯಾಣ ಅಥವಾ ಸಾರಿಗೆ ಸೌಲಭ್ಯ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ಘೋಷಣೆ ಮಾಡಲಿದೆ ಎಂದು ಮಾಹಿತಿ ತಿಳಿಸಿದ್ದಾರೆ
ಈ ಒಂದು ಹೇಳಿಕೆ ಇಡೀ ರಾಜ್ಯದ ಅತ್ಯಂತ ಚರ್ಚೆಗೆ ಕಾರಣವಾಗುತ್ತಿದೆ ಇದರಿಂದ ಒಡ ಕುಟುಂಬಗಳಿಗೆ ನೇರವಾಗಿ ಸಹಾಯವಾಗಲಿ ಎಂದು ವಿಶ್ಲೇಷಿಸಲಾಗುತ್ತಿದೆ.
ಬಸವರಾಜ್ ರಾಮ ರೆಡ್ಡಿ ಅವರು ಮುಂದೆ ಮಾತನಾಡುವ ಸಂದರ್ಭದಲ್ಲಿ ನಾವು ಶಕ್ತಿ ಯೋಜನೆ ಅಡಿಯಲ್ಲಿ ವಿದ್ಯುತ್ ಚಾಲಿತ ಬಸ್ಗಳ ಸೇವೆಗಳನ್ನು ಆರಂಭಿಸಲಾಗಿದೆ ಇದರಿಂದ ಪರಿಸರ ಸ್ನೇಹಿ ಹಾಗೂ ದೀರ್ಘಕಾಲಿಕ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಮಾತನಾಡಿದ್ದಾರೆ
ಕೊನೆಯದಾಗಿ ಇಂಥ ಘೋಷಣೆಗಳು ಜನರಿಗೆ ಅದರಲ್ಲಿ ಬಡವರಿಗೆ ಹೊಸ ಉಮ್ಮಸ್ಸು ಮೂಡುತ್ತವೆ ಎಂದು ಹೇಳಬಹುದು ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ