Annabhagya: ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ವಿತರಣೆಯಲ್ಲಿ ದೊಡ್ಡ ಬದಲಾವಣೆ, ಇಲ್ಲಿದೆ ನೋಡಿ ಮಾಹಿತಿ
ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿ ವಿತರಣೆಯಲ್ಲಿ ದೊಡ್ಡ ಬದಲಾವಣೆ ಮಾಡಿದೆ, ಹೌದು ಸ್ನೇಹಿತರೆ ಈ ಹಿಂದೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ನೀಡುವಂತ ಐದು ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ 5 ಕೆ.ಜಿ ಅಕ್ಕಿ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿತ್ತು ಆದರೆ ಇನ್ನು ಮುಂದೆ ಐದು ಕೆಜಿ ಅಕ್ಕಿ ಹಣವನ್ನು ನೀಡುವುದು ಸಂಪೂರ್ಣವಾಗಿ ಬಂದ್ ಮಾಡಲು ಸರಕಾರ ನಿರ್ಧಾರ ಮಾಡಿದ್ದು ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನಿಯ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ
ಅನ್ನಭಾಗ್ಯ ಯೋಜನೆ (Annabhagya).?
ಅನ್ನಭಾಗ್ಯ ಯೋಜನೆ, ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿ ಯೋಜನೆಗಳಲ್ಲಿ ಈ ಒಂದು ಯೋಜನೆಯು ಕೂಡ ಒಂದಾಗಿದೆ. ಈ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಅಂತೋದಯ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದಂತ ಕುಟುಂಬದವರಿಗೆ ತಲಾ 10 ಕೆ.ಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಪಕ್ಷ ಬರವಸೆ ನೀಡಿತ್ತು. ಅದೇ ರೀತಿ ಅಧಿಕಾರಕ್ಕೆ ಬಂದ ನಂತರ ಈ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ

ಆದರೆ ಅಕ್ಕಿ ಅಭಾವದಿಂದ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರ ನೀಡುತ್ತಿರುವಂತಹ 5 ಕೆಜಿ ಅಕ್ಕಿ ಮಾತ್ರ ಜನರಿಗೆ ಸಿಗುತ್ತಿದೆ ಮತ್ತು ರಾಜ್ಯ ಸರ್ಕಾರ ಉಳಿದ ಐದು ಕೆ.ಜಿ ಅಕ್ಕಿಗೆ ಹಣ ನೀಡುತ್ತಾ ಬಂದಿದೆ. ಹೌದು ಸ್ನೇಹಿತರೆ 1 ಕೆಜಿ ಅಕ್ಕಿಗೆ 34 ರೂಪಾಯಿಯಂತೆ 5 ಕೆ.ಜಿ ಅಕ್ಕಿಗೆ 170 ಹಣವನ್ನು ಇಲ್ಲಿವರೆಗೂ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತಾ ಬಂದಿದೆ. ಆದರೆ ಇನ್ನು ಮುಂದೆ ಈ ಹಣ ನೀಡುವುದು ಬದಲಾಗಿ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ
ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ವಿತರಣೆ (Annabhagya).?
ಹೌದು ಸ್ನೇಹಿತರೆ ಕಾಂಗ್ರೆಸ್ ಪಕ್ಷ ಗ್ಯಾರಂಟಿ ನೀಡಿದ ಭರವಸೆಯ ತಕ್ಕಂತೆ ಇನ್ನು ಮುಂದೆ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ನೀಡುವುದಾಗಿ ತೀರ್ಮಾನ ಮಾಡಲಾಗಿದೆ, ಈ ತೀರ್ಮಾನವು ಫೆಬ್ರವರಿ ತಿಂಗಳನಲ್ಲಿ ಮಾಡಲಾಗಿದೆ ಆದ್ದರಿಂದ ಇನ್ನು ಮುಂದೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ನ್ಯಾಯಬೆಲೆ ಅಂಗಡಿಯ ಮೂಲಕ ಸಿಗುತ್ತದೆ.
ಈ ತಿಂಗಳು ಕುಟುಂಬದ ಸದಸ್ಯರಿಗೆ ತಲಾ 15 ಕೆಜಿ ಅಕ್ಕಿ ವಿತರಣೆ (Annabhagya).?
ಹೌದು ಸ್ನೇಹಿತರೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿ ವಿತರಣೆ ಮಾಡುವುದಾಗಿ ಫೆಬ್ರವರಿ ತಿಂಗಳಿನಲ್ಲಿ ನಿರ್ಧಾರ ಮಾಡಲಾಯಿತು ಆದರೆ ಫೆಬ್ರವರಿ ತಿಂಗಳಿನಲ್ಲಿ 10 ಕೆಜಿ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗಲಿಲ್ಲ ಆದ್ದರಿಂದ ಫೆಬ್ರುವರಿ ತಿಂಗಳಿನಲ್ಲಿ ನೀಡಬೇಕಾದ 5 ಕೆಜಿ ಅಕ್ಕಿಯನ್ನು ಸೇರಿಸಿ ಮಾರ್ಚ್ ತಿಂಗಳಿನಲ್ಲಿ ನೀಡುವ ಹತ್ತು ಕೆಜಿ ಅಕ್ಕಿಯ ಜೊತೆಗೆ ಒಟ್ಟು 15 ಕೆಜಿ ಅಕ್ಕಿ ಸದಸ್ಯರಿಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆಹಾರ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ಮಾಹಿತಿ ತಿಳಿಸಿದ್ದಾರೆ
ಹೌದು ಸ್ನೇಹಿತರೆ ಫೆಬ್ರವರಿ ತಿಂಗಳ 5 ಕೆಜಿ ಅಕ್ಕಿ ಹಾಗೂ ಮಾರ್ಚ್ ತಿಂಗಳ 10 ಕೆಜಿ ಅಕ್ಕಿ ಸೇರಿಸಿ ಈ ತಿಂಗಳಿನಲ್ಲಿ ಪ್ರತಿ ಸದಸ್ಯರಿಗೆ 15 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. ಆದ್ದರಿಂದ ಇದು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಮಾಡಲಾದ ದೊಡ್ಡ ಬದಲಾವಣೆಯಾಗಿದೆ.!
ಹೌದು ಸ್ನೇಹಿತರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದಂತ ಕುಟುಂಬದವರಿಗೆ ಪ್ರತಿ ಸದಸ್ಯರಿಗೆ 15 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ & ಈ 15 ಕೆಜಿ ಅಕ್ಕಿ ಮಾರ್ಚ್ ತಿಂಗಳಿನಲ್ಲಿ ಮಾತ್ರ ವಿತರಣೆ ಮಾಡಲಾಗುತ್ತದೆ ಮುಂದಿನ ತಿಂಗಳು ಅಂದರೆ ಏಪ್ರಿಲ್ ತಿಂಗಳಿನಲ್ಲಿ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ ಮತ್ತು ಈ ತಿಂಗಳು ಅಂತೋದಯ ಕಾರ್ಡ್ ಹೊಂದಿದವರಿಗೆ ಕೆಳಗಿನ ತಿಳಿಸಿದ ರೀತಿಯಲ್ಲಿ ಅಕ್ಕಿ ವಿತರಣೆ ಮಾಡಲಾಗುತ್ತದೆ
ಅಂಥೋದಯ ಕಾರ್ಡ್ ಇದ್ದವರಿಗೆ ಈ ರೀತಿಯಾಗಿ ಈ ತಿಂಗಳು ಅಕ್ಕಿ ಸಿಗುತ್ತದೆ (Annabhagya).?
1 ರಿಂದ 3 ಸದಸ್ಯರಿಗೆ:- 35 K.G ಅಕ್ಕಿ ವಿತರಣೆ
4 ಸದಸ್ಯರಿಗೆ:- 45 K.G ಅಕ್ಕಿ ವಿತರಣೆ
5 ಸದಸ್ಯರಿಗೆ:- 65 K.G ಅಕ್ಕಿ ವಿತರಣೆ
6 ಸದಸ್ಯರಿಗೆ:- 85 K.G ಅಕ್ಕಿ ವಿತರಣೆ
7 ಸದಸ್ಯರಿಗೆ:- 105 K.G ಅಕ್ಕಿ ವಿತರಣೆ
8 ಸದಸ್ಯರಿಗೆ:- 125 K.G ಅಕ್ಕಿ ವಿತರಣೆ
9 ಸದಸ್ಯರಿಗೆ:- 145 K.G ಅಕ್ಕಿ ವಿತರಣೆ
10 ಸದಸ್ಯರಿಗೆ:- 165 K.G ಅಕ್ಕಿ ವಿತರಣೆ
ಹತ್ತು ಜನ ಸದಸ್ಯರಿಗಿಂತ ಹೆಚ್ಚಿದ್ದರೆ ಸದಸ್ಯರ ಅನುಪಾತದ ಆಧಾರದ ಮೇಲೆ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಾಹಿತಿ ತಿಳಿಸಿದೆ ಹೆಚ್ಚಿನ ವಿವರಕ್ಕಾಗಿ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ
ಸ್ನೇಹಿತರ ಇದೇ ರೀತಿ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಹೊಸ ಮಾಹಿತಿ ತಿಳಿಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು ಇದರಿಂದ ಪ್ರತಿದಿನ ಮಾಹಿತಿ ಸಿಗುತ್ತದೆ
2 thoughts on “Annabhagya: ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ವಿತರಣೆಯಲ್ಲಿ ದೊಡ್ಡ ಬದಲಾವಣೆ, ಇಲ್ಲಿದೆ ನೋಡಿ ಮಾಹಿತಿ”