Anna bhagya Amount: ಇನ್ನೂ ಮುಂದೆ ಅಕ್ಕಿ ಹಣ ಬಂದ್.! ಕಾರಣ ಏನು ಗೊತ್ತಾ.! ಇಲ್ಲಿದೆ ಮಾಹಿತಿ
ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿದೆ ಮತ್ತು ಈ ಯೋಜನೆ ಅಡಿಯಲ್ಲಿ ಬಡ ಕುಟುಂಬಗಳಿಗೆ ಉಚಿತವಾಗಿ ಅಕ್ಕಿ ಹಾಗೂ ಇತರ ದಿನನಿತ್ಯ ಬಳಸುವ ವಸ್ತುಗಳ ವಿತರಣೆ ಮಾಡುವ ಉದ್ದೇಶದಿಂದ ಜಾರಿಗೆ ತರಲಾಯಿತು.! ಹೌದು ಸ್ನೇಹಿತರೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ನೀಡುವ ಅಕ್ಕಿಯ ಜೊತೆಗೆ ನಮ್ಮ ರಾಜ್ಯ ಸರ್ಕಾರವು 5 ಕೆಜಿ ಅಕ್ಕಿಯ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತಾ ಬಂದಿದೆ ಆದರೆ ಇದೀಗ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಇನ್ನು ಮುಂದೆ ಅಕ್ಕಿ ಹಣ ಬರುವುದಿಲ್ಲ ಕಾರಣ ಏನು ಎಂಬ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆರಂಭ ಬೇಗ ಅರ್ಜಿ ಸಲ್ಲಿಸಿ
ಅನ್ನಭಾಗ್ಯ ಯೋಜನೆ (Anna bhagya Amount)..?
ಹೌದು ಸ್ನೇಹಿತರೆ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜೊತೆಗೂಡಿ ಈ ಅನ್ನ ಭಾಗ್ಯ ಯೋಜನೆ ಅಥವಾ ಗರೀಬ್ ಕಲ್ಯಾಣಿ ಯೋಜನೆಯನ್ನು ಜಾರಿಗೆ ತರಲಾಯಿತು ಮತ್ತು ಈ ಒಂದು ಯೋಜನೆ ಅಡಿಯಲ್ಲಿ ಪ್ರಸ್ತುತ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿ ಫಲಾನುಭವಿಗಳಿಗೆ ದೊರೆಯುತ್ತಿದೆ ಮತ್ತು ನಮ್ಮ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಜನರಿಗೆ ಭರವಸೆ ನೀಡಿತ್ತು.!

ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವ ಉದ್ದೇಶದಿಂದ ಜನರಿಗೆ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಯಿತು ಮತ್ತು ಈ ಗ್ಯಾರೆಂಟಿ ಯೋಜನೆಗಲ್ಲಿ ಅನ್ನಭಾಗ್ಯ ಯೋಜನೆಯು ಕೂಡ ಒಂದು ಗ್ಯಾರಂಟಿ ಯೋಜನೆಯಾಗಿದೆ ಹಾಗೂ ಈ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕಾಂಗ್ರೆಸ್ ಪಕ್ಷವು 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿತ್ತು ಆದರೆ ಅಕ್ಕಿಯ ಅಭಾವದಿಂದ ಕೇಂದ್ರ ಸರ್ಕಾರ ನೀಡುತ್ತಿರುವಂತಹ 5 ಕೆಜಿ ಅಕ್ಕಿ ಫಲಾನುಭವಿಗಳಿಗೆ ಮಾತ್ರ ದೊರೆಯುತ್ತಿದೆ ಮತ್ತು ಉಳಿದ 5 ಕೆಜಿ ಅಕ್ಕಿ ಹಣವನ್ನು ಕಾಂಗ್ರೆಸ್ ಪಕ್ಷವು ಆಹಾರ ಇಲಾಖೆಯ ಮೂಲಕ ಫಲಾನುಭವಿಗಳ ಖಾತೆಗೆ ಇಲ್ಲಿವರೆಗೂ ಹಣ ವರ್ಗಾವಣೆ ಮಾಡುತ್ತಾ ಬಂದಿದೆ
ಬ್ಯಾಂಕ್ ಆಫ್ ಬರೋಡ ಖಾಲಿ ಹುದ್ದೆಗಳ ನೇಮಕಾತಿ.! ಬೇಗ ಈ ರೀತಿ ಅರ್ಜಿ ಸಲ್ಲಿಸಿ ಇಲ್ಲಿದೆ ನೋಡಿ ಮಾಹಿತಿ
ಇನ್ನು ಮುಂದೆ ಅಕ್ಕಿ ಹಣ ಬರುವುದಿಲ್ಲ (Anna bhagya Amount).?
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕಾಂಗ್ರೆಸ್ ಪಕ್ಷವು 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿತ್ತು ಮತ್ತು ಅಕ್ಕಿ ಅಭಾವದಿಂದ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಮಾತ್ರ ನೀಡುತ್ತಿದೆ ಹಾಗೂ ಉಳಿದ ಐದು ಕೆಜಿ ಅಕ್ಕಿಯ ಹಣವನ್ನು ಅಂದರೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆ.ಜಿ ಅಕ್ಕಿಗೆ 170 ಹಣವನ್ನು ಫಲಾನುಭವಿಗಳ ಖಾತೆಗೆ ಇಲ್ಲಿವರೆಗೂ ವರ್ಗಾವಣೆ ಮಾಡಲಾಗಿದೆ ಆದರೆ ಇನ್ನೂ ಮುಂದೆ ಈ ಹಣ ನೀಡುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ನಿಲ್ಲಿಸಲು ಹೊರಟಿದೆ ಕಾರಣ ಏನು ಎಂದು ಈಗ ತಿಳಿಯೋಣ
ಹೌದು ಸ್ನೇಹಿತರೆ ರಾಜ್ಯ ಸರ್ಕಾರ ಇನ್ನು ಮುಂದೆ ಅಕ್ಕಿ ಹಣ ನೀಡುವುದು ಬದಲಾಗಿ ಜನರಿಗೆ 5 ಕೆಜಿ ಅಕ್ಕಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಆಹಾರ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ಮಾಹಿತಿ ತಿಳಿಸಿದ್ದಾರೆ ಆದ್ದರಿಂದ ಇನ್ನು ಮುಂದೆ ಐದು ಕೆಜಿ ಅಕ್ಕಿ ಹಣ ನೀಡುವುದನ್ನು ನಿಲ್ಲಿಸಿ ಐದು ಕೆಜಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡಲಾಗುತ್ತದೆ.!
ಕೇಂದ್ರ ಸರ್ಕಾರ ಕಡೆಯಿಂದ ಉಚಿತ ಮನೆ ಪಡೆಯಲು ಅರ್ಜಿ ಆರಂಭವಾಗಿದೆ.! ಬೇಗ ಈ ರೀತಿ ಅರ್ಜಿ ಸಲ್ಲಿಸಿ
ಹೌದು ಸ್ನೇಹಿತರೆ, ನಮಗೆ ತಿಳಿದು ಬಂದಿರುವ ಮಾಹಿತಿ ಪ್ರಕಾರ ಮುಂದಿನ ತಿಂಗಳು ಅಂದರೆ ಮಾರ್ಚ್ ತಿಂಗಳಿನಿಂದ ಅಥವಾ ಏಪ್ರಿಲ್ ತಿಂಗಳಿನಿಂದ ಅಕ್ಕಿಯ ಹಣದ ಬದಲಾಗಿ ರಾಜ್ಯ ಸರ್ಕಾರ ಅಕ್ಕಿ ನೀಡಲು ಮುಂದಾಗಿದೆ ಅಂದರೆ ಇನ್ನು ಮುಂದೆ ಒಬ್ಬ ಸದಸ್ಯರಿಗೆ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಹಾಗೂ ರಾಜ್ಯ ಸರ್ಕಾರದ 5 ಕೆಜಿ ಅಕ್ಕಿ ಜೊತೆಗೂಡಿ ಒಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ಸಿಗಲಿದೆ.! ಎಂಬ ಮಾಹಿತಿ ತಿಳಿದು ಬಂದಿದೆ
ಹೌದು ಸ್ನೇಹಿತರೆ ಅಕ್ಕಿ ನೀಡುವುದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕೆಳಗಡೆ ಕಾಮೆಂಟ್ ಬಾಕ್ಸ್ ನಲ್ಲಿ ಮಾಹಿತಿ ತಿಳಿಸಿ ಮತ್ತು ಇದರ ಜೊತೆಗೆ ನೀವು ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ನಮ್ಮ ರಾಜ್ಯದ ವಿವಿಧ ಸುದ್ದಿಗಳನ್ನು ಪ್ರತಿದಿನ ತಿಳಿಯಲು ಬಯಸುತ್ತಿದ್ದರೆ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು