anganwadi Recruitment: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿ! ಜ.5 ರೊಳಗೆ ಅರ್ಜಿ ಸಲ್ಲಿಸಿ, ಇಲ್ಲಿದೆ ವಿವರ

anganwadi Recruitment: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿ! ಜ.5 ರೊಳಗೆ ಅರ್ಜಿ ಸಲ್ಲಿಸಿ, ಇಲ್ಲಿದೆ ವಿವರ

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವಂತ ಹಲವಾರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಆದಿ ಸೂಚನೆ ಬಿಡುಗಡೆ ಮಾಡಿತ್ತು ಮತ್ತು ಅರ್ಜಿ ಸಲ್ಲಿಕೆಯು ಮುಕ್ತಾಯಗೊಂಡಿದ್ದು ಆದರೆ ಯಾದಗಿರಿ ಜಿಲ್ಲೆಯ ಶಹಾಪುರ ಮತ್ತು ವಡಗೇರಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವಂತಹ ಸುಮಾರು 48 ಅಂಗನವಾಡಿ ಕಾರ್ಯಕರ್ತೆ ಹಾಗೂ 76 ಅಂಗನವಾಡಿ ಸಹಾಯಕಿ ಹುದ್ದೆಗಳ ಅರ್ಜಿ ಸಲ್ಲಿಕೆ ಆರಂಭ ಮಾಡಲಾಗಿದೆ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ

ಪೋಸ್ಟ್ ಪೇಮೆಂಟ್ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅದೇ ಸೂಚನೆ ಬಿಡುಗಡೆ. ಆಸಕ್ತಿ ಇರುವವರು ಈ ರೀತಿ ಅರ್ಜಿ ಸಲ್ಲಿಸಿ

 

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿ (anganwadi Recruitment)..?

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ನಮ್ಮ ರಾಜ್ಯದಲ್ಲಿ ಇರುವಂತಹ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿ ಸೂಚನೆ ಬಿಡುಗಡೆ ಮಾಡಿತ್ತು ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯು ಕೂಡ ಮುಕ್ತಾಯಗೊಂಡಿದೆ ಆದರೆ ಇದೀಗ ಯಾದಗಿರಿ ಜಿಲ್ಲೆಯ ಶಹಾಪುರ ಮತ್ತು ವಡಗೇರಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಗೆ ಒಳಪಡುವಂತ ಸುಮಾರು 48 ಅಂಗನವಾಡಿ ಕಾರ್ಯಕರ್ತೆ ಮತ್ತು 76 ಅಂಗನವಾಡಿ ಸಹಾಯಕಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ

anganwadi Recruitment
anganwadi Recruitment

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಈ ಹಿಂದೆ ಯಾದಗಿರಿ ಜಿಲ್ಲೆಯಲ್ಲಿ ಖಾಲಿ ಇರುವಂತೆ ವಿವಿಧ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಳು ಸುಮಾರು 437 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.! ಹೌದು ಸ್ನೇಹಿತರೆ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ದಾರಿಗೆ ಆನ್ಲೈನ್ ಮೂಲಕ ಅವಕಾಶ ಮಾಡಿಕೊಡಲಾಗಿದ್ದು ಮತ್ತು ಕೊನೆಯ ದಿನಾಂಕವು ಕೂಡ ಮುಕ್ತಾಯಗೊಂಡಿದೆ.!

ಆದರೆ ಈ ಜಿಲ್ಲೆಯ ವ್ಯಾಪ್ತಿಗೆ ಒಳಪಡುವಂತ 48 ಅಂಗನವಾಡಿ ಕಾರ್ಯಕರ್ತೆ ಮತ್ತು 76 ಅಂಗನವಾಡಿ ಸಹಾಯಕಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿದಾರರ ಅರ್ಜಿಯು ರಿಜೆಕ್ಟ್ ಮಾಡಲಾಗಿದೆ ಕಾರಣ ಸಾಕಷ್ಟು ಅರ್ಜಿದಾರರು ತಮ್ಮ ಅರ್ಜಿ ನಮನೆಯಲ್ಲಿ ಭಾವಚಿತ್ರ ಹಾಗೂ ಇತರ ಮಾಹಿತಿಗಳನ್ನು ಭರ್ತಿ ಮಾಡದೆ ಹಾಗೂ ಆಧಾರ್ ಕಾರ್ಡ್ ನಮೂದಿಸದೆ ಅರ್ಜಿ ಅಪ್ಲೋಡ್ ಮಾಡಲಾಗಿದೆ.! ಇದರಿಂದ ಸಾಕಷ್ಟು ಜನರ ಅರ್ಜಿ ರಿಜೆಕ್ಟ್ ಮಾಡಲಾಗಿದೆ

 

 

ಸರ್ವರ್ ಸಮಸ್ಯೆಯಿಂದ ಅರ್ಜಿಗಳು ರಿಜೆಕ್ಟ್ (anganwadi Recruitment)..?

ಹೌದು ಸ್ನೇಹಿತರೆ ಅಂಗನವಾಡಿ ಕಾರ್ಯಕರ್ತ ಹುದ್ದೆಗಳಿಗೆ 437 ಅರ್ಜಿಗಳು ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ 205 ಅರ್ಜಿಗಳು ಸ್ವೀಕಾರವಾಗಿವೆ. ಈ ಅರ್ಜಿ ಸಲ್ಲಿಕೆಯು ನಾಲ್ಕು ಹಂತಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ ಆದರೆ ಈ ಅರ್ಜಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಕೆಲವರು ತಮ್ಮ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿಲ್ಲ ಹಾಗೂ ಕೆಲವು ದಾಖಲಾತಿಗಳು ಸರಿಯಾಗಿ ಅಪ್ಲೋಡ್ ಆಗಿಲ್ಲ ಆದ್ದರಿಂದ ಅಂತವರಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 26 2024 ರಿಂದ ಜನವರಿ 5 2025 ಸಂಜೆ 5:00 ವರೆಗೆ ತಮ್ಮ ಅರ್ಜಿ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು C.D.P.O ಮಲ್ಲಣ್ಣನವರು ತಿಳಿಸಿದ್ದಾರೆ

 

WhatsApp Group Join Now
Telegram Group Join Now       

ಹೇಗೆ ಅರ್ಜಿ ಸಲ್ಲಿಸಬೇಕು..?

ಸ್ನೇಹಿತರೆ ಯಾದಗಿರಿ ಜಿಲ್ಲೆಯಲ್ಲಿ ಖಾಲಿ ಇರುವ 76 ಸಹಾಯಕಿ ಹುದ್ದೆಗಳು ಮತ್ತು 48 ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಈ ಕೆಳಗಡೆ ನೀಡಿದಂತಹ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

https://karnemakaone.kar.nic.in/abcd/

 

ಹಂತ 01:- ಸ್ನೇಹಿತರ ಮೇಲೆ ಕೊಟ್ಟಿರುವಂತ ಲಿಂಕಿನ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಅರ್ಜಿ ಸಲ್ಲಿಸಲು ನಾಲ್ಕು ಹಂತಗಳು ಕಾಣುತ್ತವೆ ಅಲ್ಲಿ ಮೊದಲನೇ ಹಂತದಲ್ಲಿ ನಿಮ್ಮ ಜಿಲ್ಲೆ ಹಾಗೂ ತಾಲೂಕು ಆಯ್ಕೆ ಮಾಡಿಕೊಳ್ಳಿ

ನಂತರ ಅಲ್ಲಿ ಅರ್ಜಿ ಸಲ್ಲಿಸಲು ಬಯಸುವ ಹುದ್ದೆಗಳು ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿ ಹುದ್ದೆಗಳು ನಿಮಗೆ ಇಷ್ಟವಾದ ಹುದ್ದೆಗೆ ಆಯ್ಕೆ ಮಾಡಿಕೊಳ್ಳಿ

ನಂತರ ನಿಮ್ಮ ಜಾತಿ ಆಯ್ಕೆ ಮಾಡಿಕೊಂಡು ಅಲ್ಲಿ Cast RD ನಂಬರ್ ಎಂಟರ್ ಮಾಡಿ ನಂತರ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಒಂದು ಅಪ್ಲಿಕೇಶನ್ ಐಡಿ ಕಾಣುತ್ತದೆ ಅದನ್ನು ನೆನಪಿನಲ್ಲಿಟ್ಟುಕೊಳ್ಳಿ

ಹಂತ 02:- ಎರಡನೇ ಹಂತದಲ್ಲಿ ನೀವು ನಿಮ್ಮ ಹೆಸರು ಹಾಗೂ ಡೇಟಾ ಬರ್ತ್ ಮತ್ತು ನಿಮ್ಮ ಸಿಗ್ನೇಚರ್ ಮುಂತಾದ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು

ಹಂತ 03:- ಈ ಮೂರನೇ ಹಂತದಲ್ಲಿ ನಿಮ್ಮ ವಿದ್ಯಾಭ್ಯಾಸ ಹಾಗೂ ಇತರ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು

ಹಂತ 04:- ನಂತರ ನಾಲ್ಕನೇ ಹಂತದಲ್ಲಿ ನಿಮ್ಮ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ

 

ಅರ್ಜಿ ಸಲ್ಲಿಸಲು ಇರುವ ಪ್ರಮುಖ ದಿನಾಂಕಗಳು.?

ಸ್ನೇಹಿತರೆ ಈ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 26 2024 ರಿಂದ ಜನವರಿ 5 2025 ಸಾಯಂಕಾಲ 5:30ರ ಒಳಗಡೆ ಅರ್ಜಿ ಸಲ್ಲಿಸಲು ಅವಕಾಶವಿದೆ ಹೆಚ್ಚಿನ ವಿವರ ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ

 

ಸಹಾಯಕ್ಕಾಗಿ ಸಂಪರ್ಕಿಸಿ..?

ಹೌದು ಸ್ನೇಹಿತರೆ ನಿಮಗೆ ಅರ್ಜಿ ಸಲ್ಲಿಸಲು ಬರದೇ ಹೋದಲ್ಲಿ ಅಥವಾ ನಿಮ್ಮ ಅರ್ಜಿ ಅಪ್ಲೋಡ್ ಮಾಡಲು ಸಾಧ್ಯವಾಗದೇ ಹೋದಲ್ಲಿ ನೀವು ನಿಮ್ಮ ಹತ್ತಿರದ ಶಹಾಪುರ ಶಿಶು ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಕೆಳಗಡೆ ನೀಡಲಾಗಿದೆ

ದೂರವಾಣಿ ಸಂಖ್ಯೆ:- 8197630873

ಸ್ನೇಹಿತರೆ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ಹಾಗೂ ಹೆಚ್ಚಿನ ವಿವರ ಪಡೆಯಲು ಅಧಿಕೃತ ವೆಬ್ಸೈಟ್ ಮತ್ತು ಮೇಲೆ ನೀಡಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ವಿವರವನ್ನು ಪಡೆದುಕೊಳ್ಳಬಹುದು ಮತ್ತು ಇದೇ ರೀತಿ ಪ್ರತಿದಿನ ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜೋಯಿನ್ ಆಗಬಹುದು

Leave a Comment