PM ಕಿಸಾನ್ 21ನೇ ಕಂತು 2025: ರೂ.2000 ಹಣ ನವೆಂಬರ್ 19ರಂದು ರೈತರ ಖಾತೆಗೆ ಜಮಾ – ಇಲ್ಲಿದೆ ಮಾಹಿತಿ
ನಮಸ್ಕಾರ ಗೆಳೆಯರೇ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯ 21ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸರ್ಕಾರ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಬಂದಿದೆ. ಹೌದು ಗೆಳೆಯರೇ ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆಯ ಅಧಿಕೃತ ದಿನಾಂಕ ಮಾಡಲಾಗಿದೆ.
ಹಾಗಾಗಿ ಈ ಒಂದು ಲೇಖನ ಮೂಲಕ ಯಾವಾಗ ಹಣ ಜಮಾ ಆಗುತ್ತೆ ಹಾಗೂ ರೈತರು ಹಣ ಪಡೆಯಲು ಯಾವೆಲ್ಲ ಕೆಲಸ ಮಾಡಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಆದಷ್ಟು ರೈತರಿಗೆ ಶೇರ್ ಮಾಡಿ ಮತ್ತು ಪೂರ್ತಿಯಾಗಿ ಓದಿ

PM ಕಿಸಾನ್ 21ನೇ ಕಂತು 2025 (PM Kisan 21th Installment Date).?
ಹೌದು ಗೆಳೆಯರೆ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯ 21ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಇದೀಗ ಅಧಿಕೃತವಾಗಿ ದಿನಾಂಕ ಘೋಷಣೆ ಮಾಡಿದೆ, ಹೌದು ಗೆಳೆಯರೇ 19 ನವೆಂಬರ್ 2025 ರಂದು ದೇಶದ ಪ್ರತಿಯೊಬ್ಬ ರೈತರ ಖಾತೆಗೆ 21ನೇ ಕಂತಿನ ಹಣ ಜಮಾ ಮಾಡಲಾಗುತ್ತದೆ ಎಂದು ಅಧಿಕೃತವಾಗಿ ಮಾಹಿತಿ ಘೋಷಣೆ ಮಾಡಲಾಗಿದೆ.
ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ರೂ.2000 ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ತಯಾರಿ ಮಾಡಿಕೊಂಡಿದೆ, ಇದಕ್ಕಾಗಿ ಕೇಂದ್ರ ಸರ್ಕಾರ ಸುಮಾರು 22 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಹಣವನ್ನು ಬಿಡುಗಡೆ ಮಾಡಲು ನಿರ್ಧಾರ ಮಾಡಿದೆ ಹಾಗೂ 11 ಕೋಟಿಗಿಂತ ಹೆಚ್ಚಿನ ಫಲಾನುಭವಿಗಳಿಗೆ ಈ ಯೋಜನೆಯ ಮೂಲಕ 21ನೇ ಕಂತಿನ ಹಣ ಜಮಾ ಆಗುತ್ತದೆ
ಏನದು ಪಿಎಂ ಕಿಸಾನ್ ಯೋಜನೆ.?
ಕೇಂದ್ರ ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅಗತ್ಯ ಸಂದರ್ಭಗಳಲ್ಲಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ 2019 ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ.! ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ರೈತರಿಗೆ ವರ್ಷಕ್ಕೆ ₹6,000 ರೂಪಾಯಿ ಮೂರು ಕಂತಿನ ರೂಪದಲ್ಲಿ ಪ್ರತಿ ಕಂತಿಗೆ ರೂ.2000 ರೂಪಾಯಿ ಲೆಕ್ಕದಲ್ಲಿ ರೈತರ ಖಾತೆಗೆ ನೇರವಾಗಿ ಬಿಡುಗಡೆ ಮಾಡಲಾಗುತ್ತದೆ
ಹೌದು ಗೆಳೆಯರೆ ಈ ಒಂದು ಯೋಜನೆಯ ಮೂಲಕ ಇಲ್ಲಿವರೆಗೂ ರೈತರು ಸುಮಾರು 20 ಕಂತುಗಳ ಹಣ ಅಂದರೆ ಸುಮಾರು 40 ಸಾವಿರ ರೂಪಾಯಿ ಹಣವನ್ನು ಈ ಒಂದು ಯೋಜನೆಯ ಮೂಲಕ ಪಡೆದುಕೊಂಡಿದ್ದಾರೆ ಹಾಗೂ ರೈತರ ಖಾತೆಗೆ 21ನೇ ಕಂತಿನ ಹಣ 19 ನವೆಂಬರ್ 2025 ರಂದು ಬಿಡುಗಡೆ ಮಾಡಲಾಗುತ್ತದೆ
(PM ಕಿಸಾನ್ 21ನೇ ಕಂತು 2025) ₹2,000 ಹಣ ಪಡೆಯಲು ರೈತರು ಕಡ್ಡಾಯವಾಗಿ ಈ ಕೆಲಸ ಮಾಡಿ..?
- ರೈತರು ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಮತ್ತು ekyc ಮಾಡಿಸಿ ಹಾಗೂ NPCI ಲಿಂಕ್ ಮಾಡಿಸಿ
- ರೈತರು ಜಮೀನಿಗೆ FID ಕ್ರಿಯೇಟ್ ಮಾಡಿಸುವುದು ಕಡ್ಡಾಯ
- ರೈತರ ಜಮೀನು ದಾಖಲಾತಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ
- ಪಿಎಂ ಕಿಸಾನ್ ಯೋಜನೆಯ ಅರ್ಜಿಗೆ ekyc ಮಾಡಿಸಿ
- ರೈತರ ಜಮೀನು ದಾಖಲಾತಿಯಲ್ಲಿ ಹೆಸರು ಮತ್ತು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ ಹೆಸರು ಒಂದೇ ರೀತಿ ಇರುವಂತೆ ನೋಡಿಕೊಳ್ಳಿ
ವಿಶೇಷ ಸೂಚನೆ: ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ ಆಗದ ರೈತರು ಕೂಡಲೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ನಿಮ್ಮ ಗ್ರಾಮದ ಗ್ರಾಮ ಲೆಕ್ಕೀಗ ಅಧಿಕಾರಿಗಳನ್ನು ಭೇಟಿ ನೀಡಿ ಯಾವ ಕಾರಣಕ್ಕೆ ಹಣ ಬಂದಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು.!
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನೆಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಿ
ಪಿಎಂ ಕಿಸಾನ್: ಪ್ರಧಾನ ಮಂತ್ರಿ ಕಿಸಾನ್ ಇಂತಹ ರೈತರಿಗೆ ಸಿಗಲಿದೆ ರೂ.4000 ಹಣ.! PM Kisan 21th Installment Date









