Bele Parihara 2025 : ಬೆಳೆ ಪರಿಹಾರ ಹಣ ಯಾವಾಗ ಬಿಡುಗಡೆಯಾಗುತ್ತೆ, ಎಷ್ಟು ಹಣ ರೈತರಿಗೆ ಸಿಗುತ್ತೆ
ಹೌದು ಗೆಳೆಯರೇ ಈ ವರ್ಷ ನಮ್ಮ ಕರ್ನಾಟಕದಲ್ಲಿ ಅತಿಯಾದ ಮಳೆಯಿಂದ ಸಾಕಷ್ಟು ರೈತರ ಬೆಳೆ ನಷ್ಟ ಉಂಟಾಗಿದೆ ಹಾಗೂ ತೋಟಗಾರಿಕೆ ಬೆಳೆ ನಷ್ಟ ಉಂಟಾಗಿದೆ ಆದ್ದರಿಂದ ತುಂಬಾ ರೈತರು, ಪರಿಹಾರಕ್ಕಾಗಿ ಕಾಯುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ.
ಹೌದು ಗೆಳೆಯರೇ ನಾವು ಈ ಒಂದು ಲೇಖನಿಯ ಮೂಲಕ ಬೆಳೆ ಪರಿಹಾರ ಹಣ ಯಾವಾಗ ಬಿಡುಗಡೆಯಾಗುತ್ತದೆ ಹಾಗೂ ರೈತರ ಖಾತೆಗೆ ಎಷ್ಟು ಹಣ ಬರುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಆದಷ್ಟು ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿಗಾಗಿ ನಮ್ಮ ವಾಟ್ಸಪ್ ಚನಲ್ಗೆ ಸೇರಿಕೊಳ್ಳಿ
ಬೆಳೆ ಪರಿಹಾರ ಹಣ ಯಾವಾಗ ಬಿಡುಗಡೆ (Bele Parihara 2025).?
ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಮತ್ತು ಪ್ರಕೃತಿ ವಿಕೋಪ ಮುಂತಾದ ಕಾರಣಗಳಿಂದ ನಮ್ಮ ರಾಜ್ಯದ ಸಾಕಷ್ಟು ರೈತರ ಬೆಳೆ ಹಾನಿ ಹಾಗೂ ನಷ್ಟ ಉಂಟಾಗಿದೆ ಹಾಗಾಗಿ ರೈತರು ಸರಕಾರದಿಂದ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡರು ಸ್ಪಷ್ಟ ಮಾಹಿತಿ ನೀಡಿದ್ದಾರೆ

ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಅವಲೋಕನ ಮಾಡಿದ್ದಾರೆ ಹಾಗೂ ನಿರ್ದಿಷ್ಟ ಬೆಳೆ ಸಮೀಕ್ಷೆ ಮಾಡುವುದರ ಮೂಲಕ ರೈತರಿಗೆ ಪರಿಹಾರ ಬಿಡುಗಡೆ ಮಾಡಲು ಎಲ್ಲಾ ಕ್ರಮ ಕೈಗೊಳ್ಳುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ
ಅದೇ ರೀತಿ ನಮ್ಮ ಕಂದಾಯ ಸಚಿವ ಕೃಷ್ಣ ಭೈರೇಗೌಡರು ಇದಕ್ಕೆ ಸಂಬಂಧಿಸಿದಂತೆ ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಅವರು ತಿಳಿಸಿರುವ ಮಾಹಿತಿಯ ಪ್ರಕಾರ 12.54 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ ಎಂದು ಮಾಹಿತಿ ತಿಳಿಸಿದ್ದಾರೆ ಹಾಗೂ ಇದಕ್ಕಾಗಿ 2000 ಕೋಟಿ ರೂಪಾಯಿ ಪರಿಹಾರ ಹಣ ನೀಡಲಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಮುಂದುವರೆದು ಇನ್ನು 10 ಜನಗಳ ಒಳಗಡೆ ಸಮೀಕ್ಷೆ ಪೂರ್ಣಗೊಳ್ಳಲಿದೆ ರೈತರ ಖಾತೆಗೆ ಮುಂದಿನ 30 ದಿನಗಳ ಒಳಗಡೆ ಬೆಳೆ ಹಾನಿ ಉಂಟಾದ ಎಲ್ಲಾ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ ಎಂದು ಕೃಷ್ಣೆ ಬೈರೇಗೌಡರು ಮಾಹಿತಿ ತಿಳಿಸಿದ್ದಾರೆ
ಹತ್ತು ದಿನದ ಒಳಗಡೆ ಸಮೀಕ್ಷೆ ಪೂರ್ಣಗೊಳ್ಳಲಿದೆ (Bele Parihara 2025)..?
ಹೌದು ಗೆಳೆಯರೇ, ನಮ್ಮ ರಾಜ್ಯದ ಕೆಲ ಭಾಗದ ಜಿಲ್ಲೆಗಳಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಸುರಿದ ಮಳೆಯಿಂದ ಸುಮಾರು 5.29 ಲಕ್ಷ ಹೆಕ್ಟೇರ್ ಭೂ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿದೆ ಹಾಗೂ ಹಲವಾರು ರೈತರ ಬೆಳೆ ನಷ್ಟ ಉಂಟಾಗಿದೆ ಈ ಬಗ್ಗೆ ಬೆಳೆ ಹಾನಿ ಪರಿಹಾರ ನೀಡಲು ಸರಕಾರ ಸಿದ್ಧತೆ ನಡೆಸಲಾಗುತ್ತಿದೆ ಎಂದು ಕೃಷ್ಣ ಭೈರೇಗೌಡರು ಮಾಹಿತಿ.
ಮುಂದುವರೆದು ಸೆಪ್ಟೆಂಬರ್ ಅಂತ್ಯದ ವೇಳೆಗೆ ಸುರಿದ ಮಳೆಯಿಂದ ಮತ್ತೆ ರೈತರ ಬೆಳೆ ನಷ್ಟ ಉಂಟಾಗಿದ್ದು ಇದರ ಜೊತೆಗೆ ಭೀಮ ಜಲಾನಯನ ಪ್ರದೇಶದಲ್ಲಿ ವ್ಯಾಪ್ತಿಗೆ ಒಳಪಡುವ ವಿವಿಧ ಕಲಬುರ್ಗಿ, ಯಾದಗಿರಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳ ವ್ಯಾಪ್ತಿಗೆ ಒಳಪಡುವ ಸುಮಾರು 7.24 ಲಕ್ಷ ಹೆಕ್ಟೇರ್ ಭೂ ಪ್ರದೇಶದಲ್ಲಿ ರೈತರ ಬೆಳೆ ಹಾನಿಯಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಹಾಗಾಗಿ ಮತ್ತೊಮ್ಮೆ ಈ ನಾಲ್ಕು ಜಿಲ್ಲೆಗಳಲ್ಲಿ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ ಈ ಸಮೀಕ್ಷೆ ಇನ್ನು ಹತ್ತು ದಿನಗಳ ಒಳಗಡೆ ಪೂರ್ಣಗೊಳ್ಳಲಿದೆ ಎಂದು ಕೃಷ್ಣ ಬೈರೇಗೌಡರು ಮಾಹಿತಿ ತಿಳಿಸಿದ್ದಾರೆ..
ರೈತರಿಗೆ ಬೆಳೆ ಹಾನಿ ಪರಿಹಾರದ ಹಣ ಎಷ್ಟು ಸಿಗುತ್ತೆ (Bele Parihara 2025)..?
ಮಳೆಯಾರ್ಶಿತ ಬೆಳೆಗಳಿಗೆ : ಮಳೆಯಾರ್ಶಿತ ಬೆಳೆಗಳು ಹಾನಿ ಆದರೆ ರೈತರಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕಡೆಯಿಂದ ಪ್ರತಿ ಹೆಕ್ಟೇರ್ ಗೆ ₹17,000/- ವರೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲಾಗುತ್ತದೆ
ನೀರಾವರಿ ಪ್ರದೇಶದ ಬೆಳೆಗಳಿಗೆ: ನೀರಾವರಿ ಜಮೀನು ಹೊಂದಿದಂತ ರೈತರಿಗೆ ಹಾಗೂ ನೀರಾವರಿ ಆಶ್ರಿತ ಬೆಳೆಗಳಿಗೆ ಹಾನಿ ಉಂಟಾದರೆ ಅಂತ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ವತಿಯಿಂದ ಬರೋಬ್ಬರಿ ₹25,500 ವರೆಗೆ ಪ್ರತಿ ಹೆಕ್ಟೇರ್ ಗೆ ಬೆಳೆ ಪರಿಹಾರ ಹಣ ನೀಡಲಾಗುತ್ತದೆ
ದೀರ್ಘಕಾಲಿನ ಬೆಳೆಗಳಿಗೆ: ದೀರ್ಘಕಾಲಿಕ ಬೆಳವಣಿಗೆ ಹಾನಿ ಅಥವಾ ನಷ್ಟ ಉಂಟಾದರೆ ಪ್ರತಿ ಹೆಕ್ಟೇರ್ ಗೆ ₹31,000 ವರೆಗೆ ಬೆಳೆ ಪರಿಹಾರ ಸಿಗುತ್ತೆ
ರೈತರಿಗೆ ಈ ಪರಿಹಾರ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಇದರಿಂದ ರೈತರು ತಮಗಾದ ನಷ್ಟಕ್ಕೆ ಸ್ವಲ್ಪ ಪ್ರಮಾಣದಲ್ಲಿ ಆದರೂ ಸರ್ಕಾರ ಕಡೆಯಿಂದ ಆರ್ಥಿಕ ಸಹಾಯ ದೊರತಂತೆ ಆಗುತ್ತದೆ.
ಹಾಗಾಗಿ ನೀವು ಈ ಒಂದು ಮಾಹಿತಿಯನ್ನು ಆದಷ್ಟು ರೈತರಿಗೆ ಶೇರ್ ಮಾಡಿ ಮತ್ತು ಪ್ರತಿದಿನ ಮಾಹಿತಿ ಪಡೆಯಲು ತಕ್ಷಣ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಭೇಟಿ ನೀಡಿ
ಉದ್ಯೋಗ: SBI ಬ್ಯಾಂಕ್ ನಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ಉದ್ಯೋಗಾವಕಾಶ ಬೇಗ ಅರ್ಜಿ ಸಲ್ಲಿಸಿ.!