ನಮ್ಮ ಮೆಟ್ರೋಗೆ ಹೊಸ ಹೆಸರು ನಾಮಕರಣ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡುವೆ ಎಂದ ಸಿಎಂ ಸಿದ್ದರಾಮಯ್ಯ

ನಮ್ಮ ಮೆಟ್ರೋಗೆ ಹೊಸ ಹೆಸರು ನಾಮಕರಣ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡುವೆ ಎಂದ ಸಿಎಂ ಸಿದ್ದರಾಮಯ್ಯ

ನಮಸ್ಕಾರ ಗೆಳೆಯರೇ ನಮ್ಮ ರಾಜ್ಯದ ರಾಜ್ಯಧಾನಿಯಲ್ಲಿ ಅತಿ ಹೆಚ್ಚು ಬಡವರು ಹಾಗೂ ಮಧ್ಯಮ ವರ್ಗದವರು ಅತಿ ಕಡಿಮೆ ಬೆಲೆಯಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆ ಯಾವುದು ಎಂದರೆ ಅದು ತಕ್ಷಣ ನೆನಪಾಗುವುದು ಅದು ನಮ್ಮ ಮೆಟ್ರೋ, ಇದೀಗ ಮೆಟ್ರೋ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರು ಹೊಸ ಹೇಳಿಕೆ ನೀಡಿದ್ದಾರೆ ಹಾಗಾಗಿ ನಾವು ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

 

ನಮ್ಮ ಮೆಟ್ರೋ ಗೆ ಹೊಸ ಹೆಸರು ನಾಮಕರಣ..?

ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ನಮ್ಮ ಮೆಟ್ರೋಗೆ ಬಸವ ಮೆಟ್ರೋ ಎಂದು ನಾಮಕರಣ ಮಾಡುವುದಾಗಿ ಹಾಗೂ ನಾಮಕರಣ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುತ್ತೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಹೌದು ಗೆಳೆಯರೆ ವಿಶ್ವಗುರು ಬಸವಣ್ಣನವರು ಕರ್ನಾಟಕದ ಸಂಸ್ಕೃತಿಕ ನಾಯಕರಾಗಿದ್ದಾರೆ ಹಾಗಾಗಿ ಬಸವಣ್ಣನವರನ್ನು ಕರ್ನಾಟಕದ ಸಂಸ್ಕೃತಿಕ ನಾಯಕ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ ಮತ್ತು ಬಸವ ಸಂಸ್ಕೃತಿ ಅಭಿಯಾನ 2025ರ ಸಮಾರಂಭದ ವೇಳೆಯಲ್ಲಿ ಸುಮಾರು 301 ಶರಣರು ಹಾಗೂ ಗುರುಗಳು ಮತ್ತು ಸ್ವಾಮೀಜಿಗಳ ಸನ್ನಿಧಿಯಲ್ಲಿ ಹಾಗೂ ಸುಮಾರು 2 ಲಕ್ಷಕ್ಕಿಂತ ಹೆಚ್ಚು ಜನ ಸಮ್ಮುಖದಲ್ಲಿ ಸನ್ಮಾನ ಸ್ವೀಕರಿಸುವ ಸಂದರ್ಭದಲ್ಲಿ ಮಾತನಾಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ಭಾಷಣ ಸಂದರ್ಭದಲ್ಲಿ ನಾನು ಬಸವಣ್ಣನವರ ಅಭಿಮಾನಿ ಹಾಗೂ ಬಸವ ತತ್ವದಲ್ಲಿ ನಾನು ನಂಬಿಕೆ ಹಾಗೂ ಬದ್ಧತೆ ಇಟ್ಟುಕೊಂಡಿದ್ದೇನೆ. ಹಂದಿಗೂ ಹಾಗೂ ಇಂದಿಗೂ ಮತ್ತು ಮುಂದೆ ಎಂದೆಂದಿಗೂ ನಾನು ಬಸವ ತತ್ವಗಳನ್ನು ಶಾಶ್ವತವಾಗಿ ಪಾಲಿಸುತ್ತೇನೆ ಹಾಗೂ ಪ್ರಸ್ತಾಪಿಸುತ್ತೇನೆ ಎಂದು ನನ್ನ ನಂಬಿಕೆ ಎಂದು ಮಾತನಾಡಿದ್ದಾರೆ ಹಾಗೂ ಬಸವಣ್ಣನವರು ಸಹಬಾಳ್ವೆ ಮತ್ತು ಸಹಿಷ್ಣತೆಯನ್ನು ಎತ್ತಿ ಹಿಡಿದಿದ್ದಾರೆ ಹಾಗೂ ಬದುಕಿ ತೋರಿಸಿದ್ದಾರೆ ಹಾಗಾಗಿ ನಾನು ಬಸವ ತತ್ವಗಳನ್ನು ಪಾಲಿಸುತ್ತೇನೆ ಎಂದು ಭಾಷಣ ಮಾಡಿದ್ದಾರೆ

WhatsApp Group Join Now
Telegram Group Join Now       

ಅದೇ ರೀತಿ ಮುಂದುವರೆದು ಜಾತಿಯಿಂದ ಯಾರು ಶ್ರೇಷ್ಠರಲ್ಲ ಹಾಗೆಯೇ ಜ್ಞಾನ ಮತ್ತು ಪ್ರತಿಭೆ ಕೂಡ ಯಾವುದೇ ಜಾತಿಯ ಸ್ವತ್ತು ಅಲ್ಲ ಎಂದು ಮಾತನಾಡಿದ್ದಾರೆ ಮುಂದುವರೆದು ನಾನು ಕುರುಬ ಜಾತಿಯಲ್ಲಿ ಹುಟ್ಟಬೇಕು ಅಥವಾ ಶೂದ್ರ ಜಾತಿಯಲ್ಲಿ ಹುಟ್ಟಬೇಕು ಎಂದು ಯಾವುದೇ ರೀತಿ ಅರ್ಜಿ ಹಾಕಿಕೊಂಡಿಲ್ಲ ಹಾಗಾಗಿ ಈ ನಾಡಿನಲ್ಲಿ ಎಲ್ಲರೂ ಸಮಾನರು ಎಂದು ಹೇಳಿದ್ದಾರೆ

ಸಮಾನತೆ ಹಾಗೂ ಭಾತೃತ್ವ ಮತ್ತು ಸ್ವಸಂತ್ರ ಸಂವಿಧಾನದ ಆಶಯವಾಗಿದೆ ಅದೇ ರೀತಿ ಬಸವಣ್ಣನವರು ಕೂಡ ಜಾತಿ ರಹಿತ ಹಾಗೂ ವರ್ಗ ರಹಿತ ಮತ್ತು ಬಾತೃತ್ವದ ಸಮಾಜದ ನಿರ್ಮಾಣಕ್ಕೆ ಮುಂದಾಗಿದ್ದರು. ಬಸವಣ್ಣನವರು ನುಡಿದಂತೆ ನಡೆದಿದ್ದಾರೆ ಅದೇ ರೀತಿ ನಾವು ಬಸವ ತತ್ವದ ಅನಯಾಯಿಗಳಾಗಿ ನುಡಿದಂತೆ ನಡೆದಿದ್ದಾಗ ಮಾತ್ರ ನಿಜವಾದ ಬಸವ ಅನುಯಾಯಿಗಳು ಆಗುತ್ತವೆ ಎಂದು ಮಾಹಿತಿ ತಿಳಿಸಿದ್ದಾರೆ

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ, ಈ ಒಂದು ಲೇಖನೆಯನ್ನು ಆದಷ್ಟು ಶೇರ್ ಮಾಡಿ ಮತ್ತು ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು

Bajaj Scholarship – ಬಜಾಜ್ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಸಿಗಲಿದೆ 8 ಲಕ್ಷದವರೆಗೆ ವಿದ್ಯಾರ್ಥಿವೇತನ!

 

Leave a Comment

?>