ಅನರ್ಹ BPL ರೇಷನ್ ಕಾರ್ಡ್ ರದ್ದು ಮಾಡಲ್ಲ – ಸಚಿವ ಮುನಿಯಪ್ಪ ಮಹತ್ವದ ಹೇಳಿಕೆ
ನಮಸ್ಕಾರ ಗೆಳೆಯರೇ ಇತ್ತೀಚಿಗೆ ನಮ್ಮ ಕರ್ನಾಟಕದಲ್ಲಿ ತೀವ್ರವಾಗಿ ಚರ್ಚೆಯಾಗಿಸುತ್ತಿರುವ ವಿಷಯ ಯಾವುದು ಅಂತಾರೆ. ಅದು bpl ರೇಷನ್ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ.! ಇದಕ್ಕೆ ಸಾಕಷ್ಟು ಜನ ವಿರೋಧ ವ್ಯಕ್ತವಾಗುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪನವರು ಇದೀಗ ಮಹತ್ವದ ಹೇಳಿಕೆ ನೀಡಿದ್ದಾರೆ ಹಾಗಾಗಿ ನಾವು ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರ ತಿಳಿದುಕೊಳ್ಳೋಣ
ಅನರ್ಹ BPL ರೇಷನ್ ಕಾರ್ಡ್ ರದ್ದು ಮಾಡಲ್ಲ..?
ಹೌದು ಸ್ನೇಹಿತರೆ ನಮ್ಮ ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದಂತ ಕೆಎಚ್ ಮುನಿಯಪ್ಪನವರು ಇದೀಗ ಮಹತ್ವದ ಹೇಳಿಕೆ ನೀಡಿದ್ದಾರೆ.! ಅವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ನಾವು ಯಾವುದೇ ರೀತಿ ಅನರ್ಹ bpl ರೇಷನ್ ಕಾರ್ಡ್ ರದ್ದು ಮಾಡುವುದಿಲ್ಲ ಆದರೆ ಅಂತ ಕಾರ್ಡ್ ಗಳನ್ನು APL ಕಾರ್ಡ್ ಗಳಾಗಿ ಕನ್ವರ್ಟ್ ಮಾಡಲಾಗುತ್ತದೆ ಎಂದು ಕೆ ಹೆಚ್ ಮುನಿಯಪ್ಪ ಮಾಹಿತಿ ಹಂಚಿಕೊಂಡಿದ್ದಾರೆ..

ಹೌದು ಸ್ನೇಹಿತರೆ ಬೆಂಗಳೂರಿನಲ್ಲಿ ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡುವ ವಿಚಾರದ ಕುರಿತು ಮಾತನಾಡುವ ಸಂದರ್ಭದಲ್ಲಿ ಬಿಪಿಎಲ್ ಅನರ್ಹ ಕಾರ್ಡ್ ನೇಮಗಳ ಪ್ರಕಾರ ಪರಿಷ್ಕರಣೆ ಮಾಡಲಾಗುತ್ತಿದೆ ಆ ಕಾರ್ಡುಗಳನ್ನು ನಾವು ಯಾವುದೇ ಕಾರಣಕ್ಕೆ ರದ್ದು ಮಾಡುವುದಿಲ್ಲ ಬದಲಾಗಿ ಅಂತ ಕಾರ್ಡುಗಳನ್ನು apl ರೇಷನ್ ಕಾರ್ಡ್ ಗಳಾಗಿ ಮಾರ್ಪಡು ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ..
ಇದರ ಜೊತೆಗೆ ನಾವು ಎಲ್ಲಾ ಕಾರ್ಡ್ಗಳ ಪರಿಷ್ಕರಣೆ ಮಾಡುತ್ತೇವೆ ಮತ್ತು ವರ್ಗಾವಣೆ ಸಂದರ್ಭದಲ್ಲಿ ಯಾವುದೇ ರೀತಿ ಸಮಸ್ಯೆ ಉಂಟಾದರೆ ಅಥವಾ ಸಣ್ಣಪುಟ್ಟ ತೊಂದರೆಯಾದರೆ ನಾವು 24 ಗಂಟೆಗಳ ಒಳಗಡೆ ಅದನ್ನು ಸರಿಪಡಿಸುತ್ತೇವೆ. ಹಾಗೂ ಆಹಾರ ಧಾನ್ಯ ಕೊಡುವ ಕೆಲಸವೂ ಕೂಡ ಇಂದಿನಂತೆ ನಡೆಯಲಿದೆ ಎಂದು ಮಾಹಿತಿ ತಿಳಿಸಿದ್ದಾರೆ
ನಮ್ಮ ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಅನರ್ಹ ಪಡಿತರ ಚೀಟಿಯ ಲಿಸ್ಟ ನೀಡಲಾಗಿದ್ದು ಅಂತವರಿಗೆ ಮೂರು ದಿನಗಳವರೆಗೆ ಪಡಿತರ ವಿತರಣೆ ತಡೆಹಿಡಿಯಲು ಮೌಕಿಕ ಆದೇಶ ಮಾಡಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ..
ಕುಟುಂಬದ ವಾರ್ಷಿಕ ಆದಾಯ 1,20,000 ಕ್ಕಿಂತ ಹೆಚ್ಚಿರುವ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಹಿನ್ನೆಲೆಯಲ್ಲಿ ಸಾಕಷ್ಟು ಜನರು ಆಕ್ರೋಶ ಅವರ ಆಗುತ್ತಿದ್ದರೆ ಹಾಗೂ ಇನ್ನೂ ಕೆಳಗಡೆ ಗೊಂದಲ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಬಹುದು.
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನೆಯನ್ನು ಶೇರ್ ಮಾಡಿ ಮತ್ತು ಪ್ರತಿದಿನ ಮಾಹಿತಿಗಾಗಿ
ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು