Bpl Card: ಅನರ್ಹ 3.65 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು – ಸಿಎಂ ಸಿದ್ದರಾಮಯ್ಯ

Bpl Card: ಅನರ್ಹ 3.65 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು – ಸಿಎಂ ಸಿದ್ದರಾಮಯ್ಯ

ನಮಸ್ಕಾರ ಗೆಳೆಯರೇ, ನಮ್ಮ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ಗೃಹ ಕಚೇರಿಯಲ್ಲಿ ನಡೆದ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಲ್ಲಿ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ಇದೀಗ 3.65 ಲಕ್ಷ ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಪಡಿಸಿ ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ಮಾಡಿದ್ದಾರೆ ಇದಕ್ಕೆ ಸಂಬಂಧಿಸಿದ ವಿವರ ತಿಳಿದುಕೊಳ್ಳೋಣ

 

3.65 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು..?

ಹೌದು ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಇದೀಗ ಅರ್ಹತೆ ಇಲ್ಲದಂತ ಹಾಗೂ ಅಕ್ರಮ ಮತ್ತು ಸುಳ್ಳು ದಾಖಲಾತಿಗಳನ್ನು ನೀಡಿ bpl ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡವರನ್ನು ಪತ್ತೆ ಹಚ್ಚುವ ಕೆಲಸ ಇದೀಗ ಜೋರಾಗುತ್ತಿದೆ.!

Bpl Card
Bpl Card

 

ಬುದುವಾರ ಕೃಷ್ಣದಲ್ಲಿ ನಡೆದ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗೃಹಕ ವ್ಯವಹಾರ ಇಲಾಖೆಯ ಪ್ರಗತಿ ಪರಿಶೀಲನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಆಹಾರ ಇಲಾಖೆ ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.!

WhatsApp Group Join Now
Telegram Group Join Now       

ಅವರು ನೀಡಿರುವ ಮಾಹಿತಿಯ ಪ್ರಕಾರ ನಮ್ಮ ರಾಜ್ಯದಲ್ಲಿ ಈಗಾಗಲೇ 3.65 ಲಕ್ಷ ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪತ್ತೆ ಹಚ್ಚಿ ರದ್ದು ಮಾಡಲಾಗಿದೆ ಹಾಗೂ ಇನ್ನುಳಿದ ಅನರ್ಹ ರೇಷನ್ ಕಾರ್ಡ್ ಗಳನ್ನು ಪತ್ತೆ ಹಚ್ಚಿ ಸಿಗಲಿ ರದ್ದು ಮಾಡಿ ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದರ ಜೊತೆಗೆ ಅವರು ಯಾರೊಬ್ಬ ಅರ್ಹ ವ್ಯಕ್ತಿಯ ಬಿಪಿಎಲ್ ರೇಷನ್ ಕಾರ್ಡ್ ರದ್ದು ಆಗಬಾರದು ಹಾಗೂ ರದ್ದು ಆಗದಂತೆ ಎಚ್ಚರಿಕೆ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ತಕ್ಷಣ ರದ್ದು ಮಾಡಿ ಮತ್ತು ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆದೇಶ ನೀಡಿದ್ದಾರೆ..

 

ಆಹಾರ ಸರಬರಾಜು ವಾಹನಗಳಿಗೆ GPS ಟ್ರ್ಯಾಕರ್ ಗಳು ಅಳವಡಿಸಿ..?

ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಸರಬರಾಜು ಮಾಡುವ ವಾಹನಗಳಿಗೆ ಜಿಪಿಎಸ್ ಟ್ರಾಕರ್ ಅಳವಡಿಸಲು ಸೂಚನೆ ನೀಡಲಾಗಿದೆ ಇದರಿಂದ ಇನ್ನಷ್ಟು ಹೆಚ್ಚು ಪಾರದರ್ಶಕತೆ ತರಬಹುದು ಹಾಗೂ ರಾಜ್ಯದ ಎಲ್ಲಾ ಆಹಾರ ಧಾನ್ಯಗಳ ಸಂಗ್ರಹಣದ ಗೋದಾಮುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯನವರು ಸೂಚನೆ ಮಾಡಿದ್ದಾರೆ

ಇದರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಆದ್ಯತೆ ನೀಡುವಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

WhatsApp Group Join Now
Telegram Group Join Now       

ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯಲ್ಲಿ ಖಾಲಿ ಇರುವಂತೆ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ ಅಥವಾ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ

 

ಸುಧಾರಿತ ಆಹಾರ ಕಿಟ್ ವಿತರಣೆ ಪ್ರಸ್ತಾವನೆ..?

ಈ ಹಿಂದೆ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಜನರಿಗೆ ಅಗತ್ಯವಾಗಿರುವ ಎಲ್ಲಾ ಸಾಮಗ್ರಿಗಳನ್ನು ಒಳಗೊಂಡ ಆಹಾರ ಕಿಟ್ ಚಿಂತನೆ ಮಾಡಲಾಗಿತ್ತು.! ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ ಅಧಿಕಾರಿಗಳೊಂದಿಗೆ ಮಾತನಾಡಿಸಲಾಗಿದೆ ಹಾಗೂ ಎಲ್ಲಾ ಸಾಮಗ್ರಿಗಳನ್ನು ಒಳಗೊಂಡ ಅಗತ್ಯ ಆಹಾರ ಕಿಟ್ಟು ನೀಡುವುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ

ಈ ಆಹಾರ ಕಿಟ್ ಅಡಿಯಲ್ಲಿ ಅರ್ಜಿದಾರರಿಗೆ ಸಕ್ಕರೆ, ಗೋಧಿ, ಉಪ್ಪು, ತೊಗರಿ ಬೇಳೆ, ಅಡುಗೆ ಎಣ್ಣೆ, ಮತ್ತು ಇತರ ಅಗತ್ಯ ವಸ್ತುಗಳನ್ನು ಅನ್ನಭಾಗ್ಯ ಯೋಜನೆಯ ಮೂಲಕ ನೀಡುವುದಾಗಿ ಜನರಿಗೆ ಭರವಸೆ ನೀಡಲಾಗಿದೆ

 

ನಿಮ್ಮ ರೇಷನ್ ಕಾರ್ಡ್ ರದ್ದು ಆಗಿದೆ ಹೇಗೆ ಚೆಕ್ ಮಾಡುವುದು..?

  • ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ರದ್ದು ಆಗಿದೆ ಅಥವಾ ಇಲ್ಲ ಎಂಬ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ಇದೆಯಾ ಹಾಗಾದರೆ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ

 

ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

  • ನಂತರ ಅಲ್ಲಿ ನೀವು ಈ ಸರ್ವಿಸ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
  • ನಂತರ ಅಲ್ಲಿ ರದ್ದುಪಡಿಸಲಾದ ರೇಷನ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಕ್ಯಾನ್ಸಲ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮ್ಮ ಜಿಲ್ಲೆ ಹಾಗೂ ತಾಲೂಕು ಗ್ರಾಮ ಆಯ್ದುಕೊಳ್ಳಿ
  • ನಂತರ ಅಲ್ಲಿ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಎಷ್ಟು ರೇಷನ್ ಕಾರ್ಡ್ ಗಳು ರದ್ದಾಗಿವೆ ಎಂಬ ಪಟ್ಟಿ ಸಿಗುತ್ತದೆ
  • ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಹೆಸರು ಇದೆಯಾ ಅಥವಾ ಇಲ್ಲ ಎಂಬ ಮಾಹಿತಿ ಚೆಕ್ ಮಾಡಿಕೊಳ್ಳಿ
  • ಆ ಪಟ್ಟಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಹೆಸರು ಇಲ್ಲದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇದೆ ಎಂದು ಅರ್ಥ

 

ಸ್ನೇಹಿತರ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನವನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು

ತಕ್ಷಣ ವಾಟ್ಸಪ್ ಚಾನೆಲ್ಗಳಿಗೆ ಸೇರಿಕೊಳ್ಳಬಹುದು

ಗೃಹಲಕ್ಷ್ಮಿ ಹಣ: ಜುಲೈ ಮತ್ತು ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಬಾಕಿ ಹಣ ಯಾವಾಗ ಬಿಡುಗಡೆ.! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟ ಮಾಹಿತಿ

Leave a Comment

?>