Shakti Scheme: ಇಂದು ಶಕ್ತಿ ಯೋಜನೆಯ 500ನೇ ಕೋಟಿಯ ಟಿಕೆಟ್ C.M ಸಿದ್ದರಾಮಯ್ಯ ವಿತರಣೆ.! ಇಲ್ಲಿದೆ ನೋಡಿ ವಿವರ
ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಪ್ರಮುಖವಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದೆ. ಈ ಗ್ಯಾರಂಟಿ ಯೋಜನೆಗಲ್ಲಿ ಶಕ್ತಿ ಯೋಜನೆ ಕೂಡ ಒಂದಾಗಿದ್ದು ಈ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಹೌದು ಸ್ನೇಹಿತರೆ ಇದೀಗ 12,593 ಕೋಟಿ ರೂಪಾಯಿಗೆ ಶಕ್ತಿ ಯೋಜನೆಯ ಟಿಕೆಟ್ ಮೌಲ್ಯವು ತಲುಪಿದೆ ಹಾಗಾಗಿ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಶಕ್ತಿ ಯೋಜನೆಯ ಹೊಸ ಮೈಲುಗಲ್ಲು ಸ್ಥಾಪಿಸುವ ಉದ್ದೇಶದಿಂದ ಹೊಸ ಯೋಜನೆ ಹಮ್ಮಿಕೊಂಡಿದೆ.
ಹೌದು ಸ್ನೇಹಿತರೆ ಶಕ್ತಿ ಯೋಜನೆ ಅಡಿಯಲ್ಲಿ 500 ಕೋಟಿ ಟಿಕೆಟ್ ವಿತರಣೆ ಮಾಡಲಾಗಿದೆ ಹಾಗಾಗಿ ಈ ಸಾಧನೆಯನ್ನು ಸವಿನೆನಪಿಗಾಗಿ ರಾಜ್ಯ ಸರ್ಕಾರ 500ನೇ ಕೋಟಿ ಟಿಕೆಟ್ ಅನ್ನು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಹಿಳೆಯರೊಂದಿಗೆ ಈ ಸಾಧನೆ ಹಂಚಿಕೊಳ್ಳಲು ಖುದ್ದಾಗಿ ಮುಖ್ಯಮಂತ್ರಿಯವರು ಬೆಳಗ್ಗೆ 10 ಗಂಟೆಗೆ ಗೃಹ ಸಚಿವಾಲಯದ ಕಚೇರಿ ಹತ್ತಿರ ರಸ್ತೆಯಲ್ಲಿ ಬಸ್ಸಿನಲ್ಲಿ ಸಂಚರಿಸುವ ಮಹಿಳೆಯರ ಒಬ್ಬರಿಗೆ ಈ 500ನೇ ಟಿಕೆಟ್ ವಿತರಣೆ ಮಾಡಲು ನಿರ್ಧಾರ ಮಾಡಲಾಗಿದೆ
ಹೌದು ಸ್ನೇಹಿತರೆ ರಾಜ್ಯ ಸರ್ಕಾರ ಈ ಶಕ್ತಿ ಯೋಜನೆಯನ್ನು 2023 ಜೂನ್ 11ರಂದು ಜಾರಿಗೆ ತರಲಾಯಿತು. ಇಲ್ಲಿವರೆಗೂ ಶಕ್ತಿ ಯೋಜನೆಯ ಮೂಲಕ ಕೆ ಎಸ್ ಆರ್ ಟಿ ಸಿ ಹಾಗೂ ಬಿ ಎಂ ಟಿ ಸಿ ಮತ್ತು ಎನ್ ಡಬ್ಲ್ಯೂ ಆರ್ ಟಿ ಸಿ ಹಾಗೂ ಕೆಕೆಆರ್‌ಟಿಸಿಯಲ್ಲಿ ಸುಮಾರು 836.49 ಕೋಟಿ ಜನರು ಪ್ರಯಾಣಿಸಿದ್ದಾರೆ ಎಂದು ಅಂದಾಜಿಸಲಾಗಿದೆ
ಇದರ ಜೊತೆಗೆ ಶಕ್ತಿ ಯೋಜನೆ ಅಡಿಯಲ್ಲಿ 497 ಕೋಟಿ ಭಾರಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ ಹಾಗಾಗಿ ಈ ಯೋಜನೆಗೆ ಇಲ್ಲಿವರೆಗೂ ಬರೋಬ್ಬರಿ ಎಲ್ಲಾ ಫ್ರೀ ಟಿಕೆಟ್ ಮೌಲ್ಯ ಸುಮಾರು 12593 ಕೋಟಿ ರೂಪಾಯಿ ಆಗಿದೆ
ಇಲ್ಲಿವರೆಗೂ ಅತಿ ಹೆಚ್ಚು ಮಹಿಳೆಯರನ್ನು ಕರೆದೊಯ್ಯುವ ಹಿರಿಮೆ ಬೆಂಗಳೂರಿನ ಬಿಎಂಟಿಸಿ ಪಾಲಾಗಿದೆ. ಹೌದು ಸ್ನೇಹಿತರೆ ಬಿಎಂಟಿಸಿ ಒಂದರಲ್ಲಿ ಸುಮಾರು 157.83 ಕೋಟಿ ಬಾರಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ
ಇದರ ಜೊತೆಗೆ ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಸುಮಾರು 150.97 ಕೋಟಿ ಜನರು ಪ್ರಯಾಣ ಮಾಡಿದ್ದಾರೆ, ಹಾಗೂ ಎನ್ ಡಬ್ಲ್ಯೂ ಆರ್ ಟಿ ಸಿ ಯಲ್ಲಿ ಸುಮಾರು 1016.34 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ ಹಾಗೂ ಕೆಕೆಆರ್ಟಿಸಿ ಯಲ್ಲಿ ಸುಮಾರು 71.84 ಕೋಟಿ ಮಹಿಳೆಯರು ಉಚಿತ ಮಾಡಿದ್ದಾರೆ ಎಂಬ ವರದಿ ಬಂದಿದೆ
1 thought on “Shakti Scheme: ಇಂದು ಶಕ್ತಿ ಯೋಜನೆಯ 500ನೇ ಕೋಟಿಯ ಟಿಕೆಟ್ C.M ಸಿದ್ದರಾಮಯ್ಯ ವಿತರಣೆ.! ಇಲ್ಲಿದೆ ನೋಡಿ ವಿವರ”