2nd PUC Exam 3 Time Table 2025: ದ್ವಿತೀಯ ಪಿಯುಸಿ ಪರೀಕ್ಷೆ-3 ವೇಳಾಪಟ್ಟಿ ಬಿಡುಗಡೆ ಇಲ್ಲಿದೆ ನೋಡಿ ವಿವರ
ನಮಸ್ಕಾರ ಸ್ನೇಹಿತರೆ ಇದೀಗ ನಮ್ಮ ಕರ್ನಾಟಕದಲ್ಲಿ ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷೆ ಎರಡರ ಫಲಿತಾಂಶ ಬಿಡುಗಡೆ ಮಾಡಲಾಯಿತು ಮತ್ತು ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ದ್ವಿತೀಯ ಪಿಯುಸಿ ಪರೀಕ್ಷೆ ಮೂರರ ವೇಳಾಪಟ್ಟಿ ಬಿಡುಗಡೆ ಮಾಡಿದೆ ಹಾಗಾಗಿ ಈ ಒಂದು ಲೇಖನ ಮೂಲಕ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ ಹೇಗಿದೆ ಹಾಗೂ ಪರೀಕ್ಷೆ ಯಾವ ದಿನಾಂಕದಂದು ನಡೆಸಲಾಗುತ್ತದೆ ಎಂಬ ವಿವರವನ್ನು ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಲೇಖನೆಯನ್ನು ಕೊನೆಯವರೆಗೂ ಓದಿ
ದ್ವಿತೀಯ ಪಿಯುಸಿ ಪರೀಕ್ಷೆ -2 ರ ಫಲಿತಾಂಶ ಬಿಡುಗಡೆ (2nd PUC Exam 3 Time Table 2025).?
ಹೌದು ಸ್ನೇಹಿತರೆ ನಿನ್ನೆ ಅಂದರೆ ಮೇ 16 2025 ರಂದು ದ್ವಿತೀಯ ಪಿಯುಸಿ ಪರೀಕ್ಷೆ ಎರಡರ ಫಲಿತಾಂಶವನ್ನು ಬಿಡುಗಡೆ ಮಾಡಲಾಯಿತು ಮತ್ತು ಈ ಒಂದು ಪರೀಕ್ಷೆಯಲ್ಲಿ ಸುಮಾರು 2.5 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಹಾಗಾಗಿ ನಿನ್ನ ಪಲಿತಾಂಶ ಬಿಡುಗಡೆಯಾಗಿದ್ದು ಇದೀಗ ಮತ್ತೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅವಕಾಶ ಮಾಡಿಕೊಟ್ಟಿದೆ,

ಆದ್ದರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಎರಡರಲ್ಲಿ ಫೇಲಾದಂತಹ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ 3 ಬರೆದು ಮತ್ತೊಮ್ಮೆ ಪಾಸ್ ಆಗಬಹುದು ಅಥವಾ ಇಂದಿನ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಮತ್ತೆ ಪರೀಕ್ಷೆಯಲ್ಲಿ ಕುಳಿತು ಹೆಚ್ಚಿನ ಅಂಕ ಪಡೆಯಬಹುದು ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ದ್ವಿತೀಯ ಪಿಯುಸಿ ಪರೀಕ್ಷೆ 3 ರ ವೇಳಾಪಟ್ಟಿಯ ಬಗ್ಗೆ ವಿವರ ತಿಳಿದುಕೊಳ್ಳೋಣ
ದ್ವಿತೀಯ ಪಿಯುಸಿ ಪರೀಕ್ಷೆ ಮೂರರ ವೇಳಾಪಟ್ಟಿ ಬಿಡುಗಡೆ (2nd PUC Exam 3 Time Table 2025).?
ಹೌದು ಸ್ನೇಹಿತರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇದೀಗ ದ್ವಿತೀಯ ಪಿಯುಸಿ ಪರೀಕ್ಷೆ ಮೂರರ ವೇಳಾಪಟ್ಟಿ ಬಿಡುಗಡೆ ಮಾಡಿದೆ ಈ ವೇಳಾಪಟ್ಟಿಯ ಪ್ರಕಾರ 9 ಜೂನ್ 2025 ರಿಂದ 20ನೇ ತಾರೀಖಿನವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ 3 ರ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಹಾಗಾಗಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯುವುದು ಅಥವಾ ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ ಇದೀಗ ಟೈಮ್ ಟೇಬಲ್ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ
- 09/06/2025:- ಕನ್ನಡ, ಅರೇಬಿಕ್
- 10/06/2025:- ಇತಿಹಾಸ ಮತ್ತು ಭೌತಶಾಸ್ತ್ರ
- 11/06/2025:- ರಾಜ್ಯಶಾಸ್ತ್ರ, ಜೀವಶಾಸ್ತ್ರ, ಸಂಖ್ಯಾಶಾಸ್ತ್ರ
- 12/06/2025:- ರಸಾಯನಶಾಸ್ತ್ರ, ಅರ್ಥಶಾಸ್ತ್ರ
- 13/06/2025:- ಇಂಗ್ಲಿಷ್
- 14/06/2025:- ತರ್ಕಶಾಸ್ತ್ರ ವ್ಯವಹಾರ ಅಧ್ಯಯನ, ಶಿಕ್ಷಣಶಾಸ್ತ್ರ, ಗೃಹ ವಿಜ್ಞಾನ, ಗಣಿತ
- 16/06/2025:- ಸಮಾಜಶಾಸ್ತ್ರ, ವಿದ್ಯಾನ್ಯಾನ ಶಾಸ್ತ್ರ, ಗಣಕ ವಿಜ್ಞಾನ, ಭೂಗರ್ಭ ಶಾಸ್ತ್ರ
- 17/06/2025:- ಲೆಕ್ಕಶಾಸ್ತ್ರ, ಐಚಿಕ್ಕ ಕನ್ನಡ
- 18/06/2025:- ಹಿಂದಿ
- 19/06/2025:- ಮನಃ ಶಾಸ್ತ್ರ, ಮೂಲಗಣಿತ, ಭೂಗೋಳಶಾಸ್ತ್ರ,
- 20/06/2025:- ತಮಿಳು, ಉರ್ದು, ತೆಲುಗು, ಮಲಯಾಳಂ, ಮರಾಠಿ, ಸಂಸ್ಕೃತ, ಫ್ರೆಂಚ್
ದ್ವಿತೀಯ ಪಿಯುಸಿ ಪರೀಕ್ಷೆ-3 ಅಧಿಕೃತ ವೇಳಾಪಟ್ಟಿ:- ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್:- KSEAB
ವಿಶೇಷ ಸೂಚನೆ:-ಸ್ನೇಹಿತರೆ ನಿಮಗೆ ಇದೇ ರೀತಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ಪರೀಕ್ಷೆಗಳು ಹಾಗೂ ವಿವಿಧ ಸ್ಕಾಲರ್ಶಿಪ್ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆಯಲು ನಿಮಗೆ ಇಷ್ಟವಿದೆಯಾ ಹಾಗಾದ್ರೆ ನೀವು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು ಇದರಿಂದ ಪ್ರತಿದಿನ ನಿಮಗೆ ಹೊಸ ವಿಷಯಗಳು ಹಾಗೂ ಹೊಸ ಮಾಹಿತಿ ಸಿಗುತ್ತದೆ