krishi Honda Subsidy: ಕೃಷಿ ಹೊಂಡ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ! ರೈತರು ಈ ರೀತಿ ಅರ್ಜಿ ಸಲ್ಲಿಸಿ

krishi Honda Subsidy:- ಕೃಷಿ ಹೊಂಡ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ! ರೈತರು ಈ ರೀತಿ ಅರ್ಜಿ ಸಲ್ಲಿಸಿ

ಚಾಮರಾಜನಗರ ತೋಟಗಾರಿಕೆ ಇಲಾಖೆಯ ವತಿಯಿಂದ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇರುವಂತ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಜಿಲ್ಲೆಯ ಎಲ್ಲಾ ವರ್ಗದ ರೈತರಿಗೂ ಕೂಡ ಶೇಕಡ 50% ರಿಂದ 90% ರಷ್ಟು ಸಬ್ಸಿಡಿ ಅಥವಾ ಸಹಾಯಧನ ನೀಡಲು ಅರ್ಜಿ ಆಹ್ವಾನ ಮಾಡಲಾಗಿದೆ ಆದ್ದರಿಂದ ಆಸಕ್ತಿ ಇರುವಂತಹ ರೈತರು ಕೃಷಿಗೊಂಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಬಹುದು,

ಹೌದು ಸ್ನೇಹಿತರೆ ಈ ಒಂದು ಲೇಖನ ಮೂಲಕ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು ಹಾಗೂ ಎಷ್ಟು ಸಹಾಯಧನ ಸಿಗುತ್ತದೆ ಮತ್ತು ಇತರ ಅಗತ್ಯ ವಿವರಗಳನ್ನು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇವೆ

 

ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ..?

ಹೌದು ಸ್ನೇಹಿತರೆ ಇದೀಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ (krishi Honda Subsidy) ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 2025 ಮತ್ತು 26 ನೇ ಸಾಲಿನ ಕೃಷಿಗೊಂಡ (krishi honda) ನಿರ್ಮಾಣಕ್ಕೆ ಇದೀಗ ರೈತರಿಂದ ಅರ್ಜಿ (Apply) ಆಹ್ವಾನ ಮಾಡಲಾಗಿದೆ, ಆದ್ದರಿಂದ ರೈತರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ತಮ್ಮ (krishi Honda Subsidy) ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಸಾಮಾನ್ಯ ವರ್ಗದ ಜನರಿಗೆ ಶೇಕಡ 50ರಷ್ಟು ಸಬ್ಸಿಡಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡ 90ರಷ್ಟು ಸಬ್ಸಿಡಿ ಅಥವಾ ಸಹಾಯಧನ ಮೂಲಕ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಬಹುದು

krishi Honda Subsidy
krishi Honda Subsidy

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ನೀವು ಕೃಷಿ ಹೊಂಡ ನಿರ್ಮಾಣ ಮಾಡಲು ಸಾಮಾನ್ಯ ವರ್ಗದವರು ಗರಿಷ್ಠ 75,000 ವರೆಗೆ ಸಹಾಯಧನ ಪಡೆಯಬಹುದು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಗರಿಷ್ಠ 2.28 ಲಕ್ಷದವರೆಗೆ  ಈ ಒಂದು ಯೋಜನೆ ಮೂಲಕ ಸರ್ಕಾರ ಕಡೆಯಿಂದ ಆರ್ಥಿಕ ನೆರವು ಪಡೆಯಬಹುದಾಗಿದೆ ಹಾಗಾಗಿ ಪ್ರತಿಯೊಬ್ಬ ರೈತರು ಈ ಒಂದು ಯೋಜನೆಯ ಸದುಪಯೋಗಪಡಿಸಿಕೊಳ್ಳಿ

 

ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?

  • ಕೃಷಿ ಹೊಂಡ ನಿರ್ಮಾಣ ಮಾಡಲು ಬಯಸುವ ರೈತರು ಕನಿಷ್ಠ 1 ಹೆಕ್ಟೇರ್ ಜಮೀನ್ ಹೊಂದಿರಬೇಕು
  • ಕೃಷಿ ಹೊಂಡ ನಿರ್ಮಾಣ ಮಾಡಲು ಬಯಸುವ ರೈತರ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು
  • ಕೃಷಿಗೊಂಡಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ರೈತರು ನಮ್ಮ ಕರ್ನಾಟಕದ ನಿವಾಸಿಗಳಾಗಿರಬೇಕು
  • ಕೃಷಿ ಹೊಂಡ ನಿರ್ಮಾಣ ಮಾಡಲು ಬಯಸುವ ರೈತರು ಜಮೀನು ಸರಿಯಾದ ದಾಖಲಾತಿಗಳನ್ನು ಹೊಂದಿರಬೇಕು

 

ಕೃಷಿ ಹೊಂಡ ನಿರ್ಮಾಣದ ಅಳತೆಗಳ ವಿವರ ಮತ್ತು ಪಾಲಿಸಬೇಕಾದ ನಿಯಮಗಳು..?

  • ಕೃಷಿ ಹೊಂಡ ನಿರ್ಮಾಣ ಮಾಡಲು ಬಯಸುವಂತಹ ರೈತರು ಕಡ್ಡಾಯವಾಗಿ 20×20×3 ಮೀಟರ್ ಅಳಿತೆಯ 1:1 ಇಳಿಜಾರಿನಂತೆ ಕೃಷಿ ಹೊಂಡ ನಿರ್ಮಾಣ ಮಾಡಬೇಕು
  • ಕೃಷಿ ಹೊಂಡ ನಿರ್ಮಾಣ ಮಾಡಲು ಬಯಸುವಂತಹ ರೈತರು ಕಡ್ಡಾಯವಾಗಿ ತಮ್ಮ ಜಮೀನಿನಲ್ಲಿ ಗರಿಷ್ಠ 12 ಘ.ಮೀಟರ್ ನೀರು ಸಂಗ್ರಹಣೆ ಮಾಡುವ ಕೃಷಿ ಹೊಂಡ ನಿರ್ಮಾಣ ಮಾಡಬೇಕು
  • ಕೃಷಿ ಹೊಂಡದಲ್ಲಿ ಶೇಖರಣೆಯಾದಂತ ನೀರು ಇಂಗದಂತೆ 300 ಮೈಕ್ರಾನ್ ISI ಗುಣಮಟ್ಟದ ಪಾಲಿಥಿನ್ ಪ್ಲಾಸ್ಟಿಕ್ ಹೊದಿಕೆ ಅಳವಡಿಸುವುದು ಕಡ್ಡಾಯ
  • ಕೃಷಿ ಹೊಂಡ ನಿರ್ಮಾಣ ಮಾಡಲು ಬಯಸುವಂತಹ ರೈತರು ಕಡ್ಡಾಯವಾಗಿ ಕೃಷಿ ಹೊಂಡಕ್ಕೆ ಒಳಹರಿವು ಹಾಗೂ ಹೊರಹರಿವು ಔಟ್ಲೆಟ್ ನಿರ್ಮಾಣ ಮಾಡಬೇಕು
  • ಕೃಷಿ ಹೊಂಡ ನಿರ್ಮಾಣ ಮಾಡಲು ಬಯಸುವಂತಹ ರೈತರು ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹೊಂದಿರಬೇಕು

 

ಕೃಷಿ ಹೊಂಡಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು..?

  • ಅರ್ಜಿ ನಮೂನೆ
  • ಇತ್ತೀಚಿನ ಭಾವಚಿತ್ರ
  • ಪ್ರಸ್ತುತ ವರ್ಷದ ಪಹಣಿ
  • ಅರ್ಜಿದಾರ ಆಧಾರ್ ಕಾರ್ಡ್
  • ಅರ್ಜಿದಾರ ಬ್ಯಾಂಕ್ ಖಾತೆ ವಿವರ
  • ಚೆಕ್ ಬಂದಿ,
  • ಬೆಳೆ ದೃಢೀಕರಣ ಪ್ರಮಾಣ ಪತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತರೆ ಅಗತ್ಯ ದಾಖಲಾತಿಗಳು

 

ಕೃಷಿ ಹೊಂಡಕ್ಕೆ ಅರ್ಜಿ ಸಲ್ಲಿಸುವುದು ಹೇಗೆ..?

ಕೃಷಿ ಹೊಂಡಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ರೈತರು ಮೇಲೆ ತಿಳಿಸಿದಂತೆ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆಗೆ ಅಥವಾ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಹಾಗೂ ತೋಟಗಾರಿಕೆ ಇಲಾಖೆಗಳಿಗೆ ಭೇಟಿ ನೀಡಿ

WhatsApp Group Join Now
Telegram Group Join Now       

ಸ್ನೇಹಿತರೆ ಇದೇ ರೀತಿ ನಿಮಗೆ ಹೆಚ್ಚಿನ ಮಾಹಿತಿ ಹಾಗೂ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಇತರ ಯೋಜನೆಗಳಿಗೆ ಸಂಬಂಧಿಸಿದಂತೆ ನೀವು ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು

business loan in karnataka: ರೂ.30,000 ವರೆಗೆ ಉಚಿತ ಹಣ ಸ್ವಂತ ಉದ್ಯೋಗ ಮಾಡಲು ಸಾಲ ಸೌಲಭ್ಯ ಸಿಗುತ್ತೆ.! ಅರ್ಜಿ ಸಲ್ಲಿಸಲು ಈ ದಾಖಲೆಗಳು ಬೇಕು

1 thought on “krishi Honda Subsidy: ಕೃಷಿ ಹೊಂಡ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ! ರೈತರು ಈ ರೀತಿ ಅರ್ಜಿ ಸಲ್ಲಿಸಿ”

Leave a Comment

?>