Gruhalakshmi Loan Scheme- ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರಿಗೆ ಯಾವುದೇ ಗ್ಯಾರೆಂಟಿ ಇಲ್ಲದೆ 5 ಲಕ್ಷದವರೆಗೆ ಸಾಲ ಸೌಲಭ್ಯ
ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ಇದೀಗ ಮಹಿಳೆಯರಿಗೆ ದೊಡ್ಡ ಗುಡ್ ನ್ಯೂಸ್ ನೀಡಲಾಗಿದೆ.! ಹೌದು ಸ್ನೇಹಿತರೆ ಮಹಿಳೆಯರ (women Loan Scheme) ಆರ್ಥಿಕ ಸ್ಥಿತಿ ಸುಧಾರಣೆ ಮಾಡುವುದು ಹಾಗೂ ಆರ್ಥಿಕ ಸಭಲೀಕರಣಕ್ಕಾಗಿ (government) ರಾಜ್ಯ ಸರ್ಕಾರ ಇದೀಗ ಗೃಹಲಕ್ಷ್ಮಿ ಮಹಿಳಾ ಸಾಲ ಯೋಜನೆಯನ್ನು ಜಾರಿಗೆ ತಂದಿದೆ.
ಈ ಗೃಹಲಕ್ಷ್ಮಿ ಸಾಲ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಯಾವುದೇ ಸೋರಿಕೆ ಇಲ್ಲದೆ ಗರಿಷ್ಠ ಐದು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ
ಗೃಹಲಕ್ಷ್ಮಿ ಮಹಿಳಾ ಸಾಲ ಯೋಜನೆ (Gruhalakshmi Loan Scheme).?
ಹೌದು ಸ್ನೇಹಿತರೆ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಸುಮಾರು 1.24 ಕೋಟಿ ಮಹಿಳಾ ಫಲಾನುಭವಿಗಳಿಗೆ ಕನಿಷ್ಠ 3 ಲಕ್ಷ ರೂಪಾಯಿಯಿಂದ ಗರಿಷ್ಠ 5 ಲಕ್ಷ ರೂಪಾಯಿವರೆಗೆ ಯಾವುದೇ ಆಧಾರವಿಲ್ಲದೆ ಅಥವಾ ಶೂರಿಟಿ ಇಲ್ಲದೆ ಸಾಲ ಸೌಲಭ್ಯ ನೀಡಲು ಇದೀಗ ಗೃಹಲಕ್ಷ್ಮಿ ಮಹಿಳಾ ಸಾಲ ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ತಿಳಿಸಿದ್ದಾರೆ

ಹೌದು ಸ್ನೇಹಿತರೆ ಗೃಹಲಕ್ಷ್ಮಿ ಸಾಲ ಯೋಜನೆಯ ಮೂಲಕ ಮಹಿಳೆಯರಿಗೆ ಸಣ್ಣ ಪ್ರಮಾಣದ ಉದ್ಯಮ ಪ್ರಾರಂಭಿಸಲು ಹಾಗೂ ಸ್ವಾವಲಂಬಿನಿ ಜೀವನ ಆರಂಭಿಸಲು ಮತ್ತು ಆರ್ಥಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದ ಈ ಒಂದು ಯೋಜನೆ ಜಾರಿಗೆ ತರಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ ಇನ್ನಷ್ಟು ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ
ಗೃಹಲಕ್ಷ್ಮಿ ಸಾಲ ಯೋಜನೆಯ ವಿವರಗಳು (Gruhalakshmi Loan Scheme).?
ಗೃಹಲಕ್ಷ್ಮಿ ಸಂಘಗಳ ರಚನೆ:- ಹೌದು ಸ್ನೇಹಿತರೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮಹಿಳೆಯರನ್ನು ಒಳಗೊಂಡಂತ 4 ರಿಂದ 10 ಜನರ ಸಂಘಗಳನ್ನು ರಾಜನ ಮಾಡಿ.! ಫಲಾನುಭವಿಗಳಿಗೆ ದೊರೆಯುವ ಪ್ರತಿ ತಿಂಗಳ 2000 ನಗದು ಹಣವನ್ನು ಒಟ್ಟುಗೂಡಿಸಿ ಬ್ಯಾಂಕ್ ಖಾತೆ ತೆಗೆದು ಹಣ ಜಮಾ ಮಾಡಲಾಗುತ್ತದೆ.!
ಅಂದರೆ ಒಬ್ಬ ಮಹಿಳೆಯರಿಗೆ 2000 ಹಣ ಹಾಗೂ 10 ಜನರಿಗೆ ವರ್ಷಕ್ಕೆ ಸುಮಾರು 2,40,000 ಹಣವನ್ನು ಬ್ಯಾಂಕ್ ಖಾತೆಯಲ್ಲಿ ಉಳಿತಾಯ ಮಾಡಿ ಠೇವಣಿಯನ್ನು ಆಧಾರವಾಗಿಟ್ಟುಕೊಂಡು ಮಹಿಳೆಯರಿಗೆ ಗರಿಷ್ಠ 5 ಲಕ್ಷ ವರೆಗೆ ಸಾಲ ಸೌಲಭ್ಯ ಒದಗಿಸುವಂತೆ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ತಿಳಿದುಬಂದಿದೆ
ಯಾವುದೇ ಶೂರಿಟಿ ಇಲ್ಲದೆ ಸಾಲ ಸೌಲಭ್ಯ..?
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಮಹಿಳಾ ಸಾಲ ಯೋಜನೆ ಮೂಲಕ ಯಾವುದೇ ಶೂರಿಟಿ ಇಲ್ಲದೆ ಅಂದರೆ ಯಾವುದೇ ಬ್ಯಾಂಕ್ ಸಾಲ ನೀಡಲು ಜಮೀನು ಅಥವಾ ಇತರ ದಾಖಲೆ ಪತ್ರಗಳನ್ನು ಅಡ ಇಡಬೇಕಾಗುತ್ತದೆ ಆದರೆ ಈ ಯೋಜನೆ ಮೂಲಕ ಯಾವುದೇ ಗ್ಯಾರೆಂಟಿ ಇಲ್ಲದೆ ಅಥವಾ ಯಾವುದೇ ಆಧಾರಗಳಿಲ್ಲದೆ ನೇರವಾಗಿ ಸ್ವಸಾಯ ಸಂಘ ರಚಿಸಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ
ಯಾವ ಉದ್ಯಮಗಳಿಗೆ ಸಾಲ ಪಡೆಯಬಹುದು..?
ಸ್ನೇಹಿತರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವೆ ಆದಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ತಿಳಿಸಿರುವ ಪ್ರಕಾರ ಈ ಒಂದು ಯೋಜನೆಯ ಮೂಲಕ ಮಹಿಳೆಯರು ಸ್ವಂತ ಉದ್ಯೋಗ ಪ್ರಾರಂಭ ಮಾಡಲು ಹಾಗೂ ಸಣ್ಣಪುಟ್ಟ ಅಂಗಡಿ ತೆರೆಯಲು ಮತ್ತು ಹೋಟೆಲ್ ಹಾಗೂ ಟೀ ಸ್ಟಾಲ್ ಮತ್ತು ಇತರ ಸಣ್ಣಪುಟ್ಟ ವ್ಯಾಪಾರಗಳನ್ನು ಪ್ರಾರಂಭಿಸಲು ಈ ಒಂದು ಯೋಜನೆಯ ಮೂಲಕ ಸಾಲ ಪಡೆಯಬಹುದು ಎಂದು ತಿಳಿಸಿದ್ದಾರೆ
ಈ ಯೋಜನೆ ಯಾವಾಗ ಪ್ರಾರಂಭ..?
ಸ್ನೇಹಿತರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ತಿಳಿಸಿರುವ ಪ್ರಕಾರ ಈ ಒಂದು ಯೋಜನೆಯನ್ನು ಅಕ್ಟೋಬರ್ ತಿಂಗಳಿನಿಂದ ಪ್ರಾರಂಭ ಮಾಡಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ ಹಾಗೂ ಈ ಒಂದು ಯೋಜನೆಯನ್ನು ಕೆಲ ಆಯುಧ ಜಿಲ್ಲೆಗಳಲ್ಲಿ ಪ್ರಾಯೋಗಿಕ ಹಂತದಲ್ಲಿ ಜಾರಿಗೆ ತರಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ ಹಾಗಾಗಿ ಈ ಯೋಜನೆಗೆ ಸಂಬಂಧಿಸಿದಂತೆ ಇನ್ನಷ್ಟು ವಿವರ ಅಕ್ಟೋಬರ್ ತಿಂಗಳ ನಂತರ ತಿಳಿಯುತ್ತದೆ
ಹಾಗಾಗಿ ನೀವು ಈ ಯೋಜನೆಗೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ವಿವರ ಪಡೆದುಕೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕಚೇರಿಗೆ ಭೇಟಿ ನೀಡಿ
ಸ್ನೇಹಿತರೆ ನಿಮಗೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ತಿಳಿಯಲು ಆಸಕ್ತಿ ಇದೆಯಾ ಹಾಗಾದರೆ ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿ