ಪಿಎಂ ಕಿಸಾನ್ ಸನ್ಮಾನ್ ಯೋಜನೆ: ಈ ಯೋಜನೆ 20ನೇ ಕಂತಿನ ₹2000 ಹಣ ಈ ದಿನಾಂಕದಂದು ಬಿಡುಗಡೆ
ನಮ್ಮ ದೇಶದ ಪ್ರಧಾನ ಮಂತ್ರಿಗಳಾದಂತಹ ನರೇಂದ್ರ ಮೋದಿಯವರು ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆಯ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಪಿಎಂ ಕಿಸಾನ್ ಸನ್ಮಾನ್ (PM Kishan Yojana) ಯೋಜನೆಯ ಮೂಲಕ ರೈತರಿಗೆ ವಾರ್ಷಿಕವಾಗಿ 6,000 ಹಣವನ್ನು 3 ಕಂತಿನ ರೂಪದಲ್ಲಿ ಅಂದರೆ ಪ್ರತಿ 4 ತಿಂಗಳಿಗೆ ರೂ.2000 ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
ಪಿಎಂ ಕಿಸಾನ್ 20ನೇ ಕಂತಿನ ಹಣ ಯಾವಾಗ ಬಿಡುಗಡೆ..?
ಹೌದು ಸ್ನೇಹಿತರೆ PM ಕಿಸಾನ್ ಸನ್ಮಾನ್ ನಿಧಿ ಯೋಜನೆ (PM Kishan) ಅಡಿಯಲ್ಲಿ ಇಲ್ಲಿವರೆಗೂ ಸುಮಾರು 19Th ಕಂತಿನ ಹಣವನ್ನು ರೈತರು ಪಡೆದುಕೊಂಡಿದ್ದಾರೆ. ಹಾಗಾಗಿ 20ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ರೈತರು ಎದುರು ನೋಡುತ್ತಿದ್ದಾರೆ ಎಂದು ಹೇಳಬಹುದು. ಇದಕ್ಕೆ ಸಂಬಂಧಿಸಿದಂತೆ ನಮ್ಮ ದೇಶದ ಪ್ರಧಾನ ಮಂತ್ರಿಗಳು ಸ್ಪಷ್ಟ ಮಾಹಿತಿ ನೀಡಿದ್ದಾರೆ

ಹೌದು ಸ್ನೇಹಿತರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಹಾರದಲ್ಲಿ ಸಭೆ ಒಂದರಲ್ಲಿ ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆಯ 2000 ಹಣವನ್ನು ಜುಲೈ 18ರಂದು ಬಿಡುಗಡೆ ಮಾಡಲು ತಯಾರಿ ಮಾಡಲಾಗಿದೆ ಎಂಬ ಮಾಹಿತಿ ತಿಳಿಸಿದ್ದಾರೆ. ಆದ್ದರಿಂದ ಇದು ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು ಆದರೆ ರೈತರು ಈ ಹಣ ಪಡೆಯಲು ಕೆಲವೊಂದು ಅಗತ್ಯ ಶರತ್ತುಗಳನ್ನು ಪೂರೈಸಬೇಕು ಇದಕ್ಕೆ ಸಂಬಂಧಿಸಿದೆ ವಿವರಗಳನ್ನು ನಾವು ಕೆಳಗಡೆ ನೀಡಿದ್ದೇವೆ
ಪಿಎಂ ಕಿಸಾನ್ ರೂ.2000 ಹಣ ಪಡೆಯಲು ರೈತರು ಪಾಲಿಸಬೇಕಾದ ರೂಲ್ಸ್ ಗಳು..?
ekyc ಪ್ರಕ್ರಿಯೆ (ಈ ಕೆ ವೈ ಸಿ) ಪೂರ್ಣಗೊಳಿಸಬೇಕು:- ಪಿಎಂ ಕಿಸಾನ್ ಸನ್ಮಾನ ಯೋಜನೆ ಮೂಲಕ ಹಣ ಪಡೆಯಲು ಬಯಸುವ ರೈತರು ಕಡ್ಡಾಯವಾಗಿ ತಮ್ಮ PM ಕಿಸಾನ್ ಅರ್ಜಿಯ E-kyc ಪೂರ್ಣಗೊಳಿಸಿರಬೇಕು ಹಾಗೂ PM ಕಿಸಾನ್ ಆನ್ಲೈನ್ ಪೋರ್ಟಲ್ ನಲ್ಲಿ ಮೊಬೈಲ್ ನಂಬರ್ ನೋಂದಣಿ ಮಾಡಿರಬೇಕು ಇದರ ಜೊತೆಗೆ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.
ಅದರಿಂದ ನೀವು ಈಕೆ ವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲವೆಂದರೆ ಕೂಡಲೇ ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ
ಬ್ಯಾಂಕ್ ಖಾತೆ ಸರಿಪಡಿಸಿಕೊಳ್ಳಿ:- ಹೌದು ಸ್ನೇಹಿತರೆ ತುಂಬಾ ರೈತರ ಖಾತೆಗೆ 19ನೇ ಕಂತಿನ ಹಣ ಜಮಾ ಆಗಿಲ್ಲ ಇದಕ್ಕೆ ಪ್ರಮುಖ ಕಾರಣ ರೈತರು ತಮ್ಮ ಬ್ಯಾಂಕ್ (Bank) ಖಾತೆಗೆ ಆಧಾರ್ (Aadhar) ಕಾರ್ಡ್ ಲಿಂಕ್ ಮಾಡದೆ ಇರುವುದು ಹಾಗೂ ಬ್ಯಾಂಕ್ ಖಾತೆಗೆ e-kyc ಮಾಡದೆ ಇರುವುದು ಮತ್ತು ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡಿಸದೆ ಇರುವುದು ಹಾಗಾಗಿ 19ನೇ ಕಂತಿನ ಹಣ ಜಮಾ ಆಗದಂತ ರೈತರು ಕೂಡಲೇ ಈ ಕೆಲಸ ಮಾಡಿಸಿ
ಇದರ ಜೊತೆಗೆ ಬ್ಯಾಂಕ್ ಖಾತೆಯ ಐ ಎಫ್ ಎಸ್ ಸಿ ಕೋಡ್ ಪಿಎಂ ಕಿಸಾನ್ ಯೋಜನೆಯ ಅಧಿಕೃತ ಪೋರ್ಟಲ್ಲಿ ಸರಿಯಾಗಿ ನಮೂದಿಸಿ
ಸ್ನೇಹಿತರೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ನೀವು ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.
ಇದೇ ರೀತಿ ಪ್ರತಿದಿನ ಹೊಸ ಮಾಹಿತಿ ಬೇಕಾದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನಲ್ಗಳಿಗೆ ಭೇಟಿ ನೀಡಬಹುದು
Today Gold Rate: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಇಂದು ನಿಮ್ಮ ನಗರದಲ್ಲಿ ಚಿನ್ನದ ಬೆಲೆ ಎಷ್ಟಿದೆ ತಿಳಿಯರಿ.?